ಇಂಟರ್ನೆಟ್ ಯುಗದಲ್ಲಿ, ಅದರಲ್ಲೂ ಹೆಚ್ಚಾಗಿ ಸಾಮಾಜಿಕ ಜಾಲತಾಣಗಳ ಹಾಗೂ ಮೆಸ್ಸಗಿಂಗ್ ಆಪ್ ಗಳ ಪ್ರಾಬಲ್ಯ ಹೆಚ್ಚಾಗಿರುವಂತಹ ಕಾಲದಲ್ಲಿ, ಇದರ ದುರ್ಬಳಕೆಯ ಹಲವಾರು ನಿದರ್ಶನಗಳು ನಮ್ಮ ಕಣ್ಣ ಮುಂದೆ ಇದೆ. ಇದರಲ್ಲಿ ಬಹು ಮುಖ್ಯವಾದ ದುರ್ಬಳಕೆಯೆಂದರೆ ಸುಳ್ಳು ಸುದ್ದಿಗಳನ್ನು ಹರಡಿಸುವುದು ಹಾಗೂ ಅಂತಹ ಸುದ್ದಿಗಳಿಂದ ಉಂಟಾಗುವಂತಹ ದುಷ್ಪರಿಣಾಮಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಇರೋದು.

ನಮ್ಮ ಧ್ಯೇಯ:

ಸುಳ್ಳುಗಳ ಸಂತೆಯಲ್ಲಿ ನೀವು ಬದುಕಬೇಡಿ.
ಸತ್ಯ ಏನೆಂಬುದನ್ನು ಸ್ವಲ್ಪ ಅರಿತುಕೊಳ್ಳಿ

ಅಂತರ್ಜಾಲದಲ್ಲಿ ಹಾಗೂ ಫೇಸ್ಬುಕ್ ವಾಟ್ಸಪ್ಪನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಪಸರಿಸುವಂತಹ ಸುಳ್ಳು ಸುದ್ದಿಗಳನ್ನು ಹಾಗೂ ಅದರ ನಿಜಾಂಶಗಳನ್ನು ನಿಮ್ಮ ಮುಂದೆ ಇಡುವ ಒಂದು ಸಣ್ಣ ಪ್ರಯತ್ನವೇ ದಿ ಫೇಕ್ ಬಸ್ಟರ್.

ನಮ್ಮ ಮುಖ್ಯ ವೆಬ್ಸೈಟ್ ಆಂಗ್ಲ ಭಾಷೆಯಲ್ಲಿರುತ್ತದೆ: TheFakeBuster.com