in

ಲೈವ್ ಟಿವಿಯಲ್ಲಿ ಕ್ರೇನಿನಿಂದ ಕೆಳಗೆ ಬಿದ್ದ ಪಾಕಿಸ್ತಾನದ ಮಹಿಳಾ ಆಂಕರ್ ಸಾವು – ಸತ್ಯಾಸತ್ಯತೆ

ಲೈವ್ ಟಿವಿ ಶೋನಲ್ಲಿ ಒಂದು ಮಹಿಳಾ ರಿಪೋರ್ಟರ್ ಮೇಲಿಂದ ಕೆಳಗೆ ಬಿದ್ದು ಸಾವು ಎಂದು ಒಂದು ವಿಡಿಯೋ ಫೇಸ್ಬುಕ್ ಹಾಗೂ ವಾಟ್ಸಪ್ಪಿನಲ್ಲಿ ಬಹಳ ವೈರಲ್ ಆಗಿತ್ತು.

ಬಹುಪಾಲು ಜನರಿಗೆ ಒಂದು ವಿಡಿಯೋ ಸಿಕ್ಕಿದರೆ ಸಾಕು ಅದರ ಸತ್ಯಂಶ ತಿಳಿಯದೆ ಕ್ಷಣಮಾತ್ರದಲ್ಲಿ ಶೇರ್ ಮಾಡಿಬಿಡುತ್ತಾರೆ. ಹೀಗೇನೆ ಒಂದು ವಿಡಿಯೋ ಬಹಳ ಜನಪ್ರಿಯವಾಗಿತ್ತು ಹಾಗೂ ತುಂಬಾ ಮಂದಿ ಆ ವಿಡಿಯೋದಲ್ಲಿನ ಮಹಿಳಾ ಆಂಕರ್ ನ ಆತ್ಮಕ್ಕೆ ಶಾಂತಿಯನ್ನೂ ಕೋರಿದ್ದರು, ಯಾಕೆಂದರೆ ಆ ವಿಡಿಯೋದೊಂದಿಗಿನ ಶೀರ್ಷಿಕೆಯಲ್ಲಿ ಮೇಲಿಂದ ಕೆಳಗೆ ಬಿದ್ದ ಮಹಿಳೆಯ ಸಾವು ಎಂದು ಬರೆಯಲಾಗಿತ್ತು.

ಆದರೆ ನಿಜವಾಗಿಯೂ ಆಕೆ ಹೃದಯಾಘಾತವಾಗಿ ಸತಃಲಾ? ಇಲ್ಲ. ಆಕೆ ತಲೆ ಸುತ್ತಿ ಮೇಲಿಂದ ಕೆಳಗೆ ಬಿದ್ದದ್ದಂತೂ ನಿಜ, ಅವಳಿಗೆ ಸಣ್ಣ ಪುಟ್ಟ ಗಾಯಗಳು ಆದದ್ದೂ ನಿಜ ಆದರೆ ಆಕೆಯನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು ಹಾಗೂ ಈಗ ಆಕೆ ಆರೋಗ್ಯದಿಂದಿದ್ದಾಳೆ.

ಅಲ್ಲಿ ನಡೆದದ್ದೇನು? ಕಳೆದ ವರ್ಷ ಸೆಪ್ಟೆಂಬರ್ 3, 2016 ರಂದು ಪಾಕಿಸ್ತಾನದ ಲಾಹೋರಿನಲ್ಲಿ ನಡೆಯುತ್ತಿದ್ದ “Tehreek-e-Insaf” ನ ರಾಲಿ ಒಂದನ್ನು ಇರ್ಜ್ಹಾ ಖಾನ್ ಎಂಬ ಮಹಿಳಾ ರಿಪೋರ್ಟರ್ ರಿಪೋರ್ಟ್ ಮಾಡುತ್ತಿರುವಾಗ ಉಸಿರುಗಟ್ಟುವಿಕೆ ಮತ್ತು ಬಿಸಿ ವಾತಾವರಣದಿಂದಾಗಿ ತಲೆ ಸುತ್ತಿ ಕೆಳಗೆ ಬಿದ್ದಿದ್ದಾರೆ.

ಕೆಲವು ದಿನಗಳ ಹಿಂದೆ ಆಕೆ ತನ್ನ ಟ್ವಿಟ್ಟರ್ ಅಕೌಂಟಿನಲ್ಲಿ “ತಾನು ಸಾಯಲಿಲ್ಲ, ಇನ್ನೂ ಬದುಕಿದ್ದೇನೆ, ಕೆಲವರು ನನ್ನ ಸ್ನೇಹಿತರಿಗೆ ಹಾಗೂ ಕುಟುಂಬದವರಿಗೆ ಈಗಲೂ ನನ್ನ ಸಾವಿನ ಬಗ್ಗೆ ಕೇಳಿ ಕೇಳಿ ತೊಂದರೆ ನೀಡುತ್ತಿದ್ದಾರೆ. ದಯವಿಟ್ಟು ಎಲ್ಲಾರಿಗೂ ತಿಳಿಸಿ ನಾನು ಜೀವಂತವಾಗಿದ್ದೇನೆ” ಎಂದು ಬರೆದುಕೊಂಡಿದ್ದಾರೆ.

What do you think?

0 points
Upvote Downvote

Total votes: 2

Upvotes: 1

Upvotes percentage: 50.000000%

Downvotes: 1

Downvotes percentage: 50.000000%

Comments

Leave a Reply

Your email address will not be published. Required fields are marked *

Loading…

Loading…

ಝಕೀರ್ ನಾಯ್ಕ್ ಹಾಗೂ ಭಯೋತ್ಪಾದಕ ಮಸೂದ್ ಅಜ್ಹರ್ ನ ಇಫ್ತಾರ್ ಕೂಟದ ಸತ್ಯ

ಹಾಂಗ್-ಕಾಂಗ್ ನ ಆಸ್ಪತ್ರೆಯಲ್ಲಿ ಮಗುವಿನ ಅಳು ಕೇಳಿ ಸಾವಿನಿಂದ ಎದ್ದು ಬಂದ ತಾಯಿ – ಸತ್ಯಾಸತ್ಯತೆ