in

ಆಂಗ್ಲ ಭಾಷೆಯಲ್ಲಿ ಸುಳ್ಳು ಸುದ್ದಿಗಳನ್ನು ಪ್ರಕಟಿಸುವ ಕುಖ್ಯಾತ Postcard News ವೆಬ್ಸೈಟಿನ ಕೂಸು “Postcard ಕನ್ನಡ”

Postcard News ಹಾಗೂ Postcard ಕನ್ನಡ ಎಂಬ ವೆಬ್ಸೈಟ್ಗಳು, ಫೇಸ್ಬುಕ್ ಪೇಜುಗಳು ಹಾಗೂ ಟ್ವಿಟ್ಟರ್ ಖಾತೆಗಳು ಒಂದರ ಮೇಲೊಂದು ಸುಳ್ಳು ಸುದ್ದಿಗಳನ್ನು ಹಾಗೂ ಸಾಮಾಜಿಕ ಸಾಮರಸ್ಯವನ್ನು ಕೆಡಿಸುವಂತಹ ಲೇಖನಗಳನ್ನು ಪ್ರಕಟಿಸುತ್ತಿದೆ.

ಕಾಕತಾಳೀಯವೋ ಏನೋ, ಜೂನ್ ತಿಂಗಳ ಕೊನೆಯಲ್ಲಿ ಬಿಜೆಪಿಯ ಕರ್ನಾಟಕ ಸೋಶಿಯಲ್ ಮೀಡಿಯಾ ಸೆಲ್ ನ ಮುಖ್ಯಸ್ಥ ಬಾಲಾಜಿ ಶ್ರೀನಿವಾಸ್ ತಮ್ಮ ಪಕ್ಷ 5,000 ವಾಟ್ಸಪ್ಪ್ ಗ್ರೂಪ್ ರಚಿಸುವುದೆಂದೂ, ಫೇಸ್ಬುಕ್ ಹಾಗೂ ಟ್ವಿಟ್ಟರ್ನಲ್ಲಿ ಅಜೆಂಡಾದೊಂದಿಗೆ ವಿರೋಧಿಗಳ ವಾದಗಳಿಗೆ ಪ್ರತಿರೋಧ ತೋರುವುದೆಂದೂ ಘೋಷಿಸಿದ ಕೆಲವೇ ದಿನಗಳಲ್ಲಿ Postcard ಕನ್ನಡ ಎಂಬ ಹೊಸದಾದ ವೆಬ್ಸೈಟ್, ಟ್ವಿಟ್ಟರ್ ಖಾತೆ ಹಾಗೂ ಫೇಸ್ಬುಕ್ ಪೇಜು ಹುಟ್ಟಿಕೊಂಡಿದೆ.

Postcard News ಎಂಬ ಇಂಗ್ಲಿಷ್ ವೆಬ್ಸೈಟ್, ಫೇಸ್ಬುಕ್ ಪೇಜ್ ಹಾಗೂ ಟ್ವಿಟ್ಟರ್ ಖಾತೆಯ ಕರ್ಮಕಾಂಡಗಳ ಬಗ್ಗೆ ಬರೆಯಲು ಕೂತರೆ ದಿನಗಟ್ಟಲೆ ಬರೀತಾ ಕೂರಬಹುದು ಅಷ್ಟಿದೆ ಅವರು ಹರಡುವ ಸುಳ್ಳು ಸುದ್ದಿಗಳು ಹಾಗೂ ಬಿಜೆಪಿಗೆ ವೋಟ್ ಗಿಟ್ಟಿಸಲು ಪ್ರಕಟಿಸುವಂತಹ ದ್ವೇಷಭರಿತ ಲೇಖನಗಳು. Postcard News ನ ಸುಳ್ಳು ಸುದ್ದಿಗಳ ಒಂದು ಸಣ್ಣ ಉದಾಹರಣೆಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

ಕರ್ನಾಟಕದವನಾದ ವಿವೇಕ್ ಶೆಟ್ಟಿಯೇ ಈ ಕನ್ನಡ ವೆಬ್ಸೈಟನ್ನು ನಡೆಸುತ್ತಿರಬಹುದು. who.is ಮಾಹಿತಿಯ ಪ್ರಕಾರ ಈ Postcard ಕನ್ನಡ ವೆಬ್ಸೈಟನ್ನು (ಡೊಮೇನ್ ನೇಮ್) ಜೂಲೈ 14, 2017 ರಂದು ಖರೀದಿಸಲಾಗಿದೆ. ಆಗಸ್ಟ್ 3 ರಂದು ಮೊದಲ ಲೇಖನವನ್ನು ಪ್ರಕಟಿಸಲಾಗಿದೆ, ಅದೂ ಸೀದಾ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿಯನ್ನು ವಿರೋಧಿಸಿ. ವಿರೋಧಿಸಲಿ ಸ್ವಾಮಿ, ಆದರೆ, ಎಲ್ಲಾ ಲೇಖನಗಳಲ್ಲಿ ಒಂದು ನಿರ್ದಿಷ್ಟ ರಾಜಕೀಯ ಪಕ್ಷದ ವಿರೋಧದಲ್ಲಿ ಬರೆಯುವುದು ಅಂದರೆ ಏನರ್ಥ?

ಒಬ್ಬ ಲೇಖಕನ ಹೆಸರು ಪ್ರವೀಣ್ ಕುಮಾರ್ ಮಾವಿನಕಾಡು ಎಂದು, ಇನ್ನೊಬ್ಬ ಆನ್ಲೈನ್ ಲೇಖನಗಳನ್ನು ಬರೆಯುವವನ ಹೆಸರು ವಸಿಷ್ಠ ಬಂಟನೂರ (ಬಸವರಾಜ್ ಬಂಟನೂರ) ಎಂದು. ಬಹಳಷ್ಟು ದ್ವೇಷ ಕಾರುವಂತಹ ಲೇಖನಗಳು “Editor Postcard Kannada” ಎಂಬ ಹೆಸರಿನಲ್ಲಿ ಪ್ರಕಟಿಸಲ್ಪಡುತ್ತಿವೆ. ಇವರ ಫೇಸ್ಬುಕ್ ಖಾತೆಯನ್ನೊಮ್ಮೆ ಪರಿಶೀಲಿಸಿದರೆ ಅವರು ಏನೆಲ್ಲಾ ಪಬ್ಲಿಕ್ ಆಗಿ ಪೋಸ್ಟ್ ಮಾಡುತ್ತಿರುತ್ತಾರೆ ಎನ್ನುವುದನ್ನು ಕಾಣಬಹುದು.

ಎಷ್ಟೊಂದು ಪೋಸ್ಟ್ ಕಾರ್ಡುಗಳು!

ಇವರು ಇದಕ್ಕೂ ಮುಂಚೆ ಹಲವಾರು ಬಾರಿ ಆಂಗ್ಲ ಭಾಷೆಯ ಪೋಸ್ಟ್ಕಾರ್ಡ್ ನ್ಯೂಸ್ ನ ಲೇಖನಗಳನ್ನು ಶೇರ್ ಮಾಡಿದ್ದಾರೆ. ಇವರು ವಿಶ್ವಾಸಾರ್ಹವಲ್ಲದ ಹಾಗೂ ಆಧಾರ ರಹಿತ ಲೇಖನಗಳನ್ನು ಬರೆದು ಬೇರೆ ಬೇರೆ ಬಲಪಂಥೀಯ ಫೇಸ್ಬುಕ್ ಗ್ರೂಪ್ ಗಳಿಗೆ ಶೇರ್ ಮಾಡುತ್ತಾರೆ. ಅಲ್ಲಿ ಇವರಿಗೆ ಬಹಳ ಲೈಕ್ಸ್ ಅಂಡ್ ಕಾಮೆಂಟ್ಸ್ ಗಳು ಸಿಗುತ್ತವೆ. ಉದಾಹರಣೆಗೆ ಈ ಪೋಸ್ಟನ್ನು ನೋಡಿ.

ಮೇಲುನೋಟಕ್ಕೆ ಇವರೇ ಅಂತಹ ಫೇಸ್ಬುಕ್ ಗ್ರೂಪುಗಳ ಅಡ್ಮಿನ್ ತೋರುತ್ತದೆ. ಅಂದರೆ, ಇವರು ಅಡ್ಮಿನ್ ಆಗಿರುವುದರಿಂದಲೇ, ಇವರಿಗೆ ಆರ್ಟಿಕಲ್ಸ್ ಬರೆಯುವ ಕೆಲಸ ಲಭಿಸಿರಬಹುದು, ಯಾಕೆಂದರೆ ಆಂಗ್ಲ ಭಾಷೆಯ ಪೋಸ್ಟ್ಕಾರ್ಡ್ ಅನ್ನು ಕನ್ನಡದಲ್ಲೂ ಸ್ಥಾಪಿಸಲು ಒಂದು ಸಶಕ್ತ ಫೇಸ್ಬುಕ್ ಪೇಜುಗಳು ಹಾಗೂ ಗ್ರೂಪ್ಗಳು ಬೇಕಲ್ವೆ? ಲಕ್ಷಗಟ್ಟಲೆ ಅನುಯಾಯಿಗಳಿರುವ ಪೇಜುಗಳು ಹಾಗೂ ಲಕ್ಷಗಟ್ಟಲೆ ಸದಸ್ಯರಿರುವ ಗ್ರೂಪ್ಗಳಲ್ಲಿ ಇವರ ವೆಬ್ಸೈಟ್ ನ ಲಿಂಕ್ ಗಳನ್ನು ಶೇರ್ ಮಾಡಿದರೆ ಇವರ ಕೆಲಸ ಪೂರೈಸಿದಂತಾಗುತ್ತೆ.

AltNews ಎಂಬ ಆನ್ಲೈನ್ ಮಾಧ್ಯಮದ ಪ್ರತೀಕ್ ಸಿನ್ಹಾರವರು ಇವರ ಕರ್ಮಕಾಂಡಗಳನ್ನು ಆಗಲೇ ಎಳೆಎಳೆಯಾಗಿ ಬಿಡಿಸಿ ಜನರ ಮುಂದೆ ಇಟ್ಟಿದ್ದಾರೆ. ಅದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ (ಆಂಗ್ಲ ಭಾಷೆಯಲ್ಲಿ ಇದೆ). ಇನ್ನೂ ಕೆಲವು ಲೇಖನಗಳಿವೆ ಇವರ ಬಗ್ಗೆ – ಓದಲು ಇಲ್ಲಿ ಕ್ಲಿಕ್ ಮಾಡಿ ಹಾಗೂ ಬಂಗಾಳದಲ್ಲಿ ಸುಳ್ಳು ಸುದ್ದಿಗಳನ್ನು ಹರಡಿದ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಅವರ ವೆಬ್ಸೈಟ್ನಲ್ಲಿ ಪೋಸ್ಟ್ ಮಾಡಿದಂತೆ, postcard.newsನ್ನು ಮಹೇಶ್ ವಿಕ್ರಮ್ ಹೆಗ್ಡೆ , ವಿವೇಕ್ ಶೆಟ್ಟಿ ಮತ್ತು ಅಂಕಿತಾ ರಾಜವರ್ಧನ್ ಅವರು ಸ್ಥಾಪಿಸಿ ನಡೆಸುತ್ತಿದ್ದಾರೆ.

ವಿವೇಕ್ ಶೆಟ್ಟಿ ಹಾಗೂ ವಿಕ್ರಂ ಮಹೇಶ್ ಹೆಗಡೆ (Postcard News ನ ಸ್ಥಾಪಕರು)

ಮಹೇಶ್ ಹೆಗ್ಡೆ ಅವರನ್ನು ಟ್ವಿಟ್ಟರ್ ನಲ್ಲಿ ಪಿಎಂ ಮೋದಿ ಫಾಲೋ ಮಾಡುತ್ತಾರೆ ಹಾಗೂ ವಿವೇಕ್ ಶೆಟ್ಟಿ ಮತ್ತು ಅಂಕಿತಾ ರಾಜವರ್ಧನ್ ಅವರನ್ನು ಟ್ವಿಟ್ಟರ್ ನಲ್ಲಿ ಪಿಯುಶ್ ಗೋಯಲ್ರಂತಹ ಇತರ ಕೇಂದ್ರ ಸಚಿವರು ಅನುಸರಿಸುತ್ತಿದ್ದಾರೆ. ಅಂಕಿತಾ ರಾಜವರ್ಧನ್ರ ಟ್ವಿಟರ್ ಪ್ರೊಫೈಲ್ನಲ್ಲಿ ಸುಷ್ಮಾ ಸ್ವರಾಜ್ಜನರಲ್ ವಿ.ಕೆ.ಸಿಂಗ್ರಾಜ್ನಾಥ್ ಸಿಂಗ್ ಸೇರಿದಂತೆ ಹಲವು ಕೇಂದ್ರ ಸಚಿವರ ಜೊತೆಗೆ ತೆಗೆಸಿಕೊಂಡ ಚಿತ್ರಗಳನ್ನು ಕಾಣಬಹುದು. ಪೋಸ್ಟ್ಕಾರ್ಡ್ ನ್ಯೂಸ್ ‘ಫೇಸ್ಬುಕ್ ಪುಟ ಸುಮಾರು 2,20,000 ಫಾಲ್ಲೋರ್ಸ್ ನ್ನು ಹೊಂದಿದೆ.

ಹೆಚ್ಚಿನ ಮಾಹಿತಿ ಪಡೆದ ತಕ್ಷಣ ಈ ಲೇಖನವನ್ನು ಅಪ್ಡೇಟ್ ಮಾಡಲಾಗುತ್ತದೆ…

What do you think?

0 points
Upvote Downvote

Total votes: 0

Upvotes: 0

Upvotes percentage: 0.000000%

Downvotes: 0

Downvotes percentage: 0.000000%

Comments

Leave a Reply

Your email address will not be published. Required fields are marked *

Loading…

Loading…

ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿಯವರ ಫೋಟೋ ಹಾಗೂ ಬಿಜೆಪಿ ವಕ್ತಾರ ಸಂಬಿತ್ ಪಾತ್ರನ ಸುಳ್ಳು