in

ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿಯವರ ಫೋಟೋ ಹಾಗೂ ಬಿಜೆಪಿ ವಕ್ತಾರ ಸಂಬಿತ್ ಪಾತ್ರನ ಸುಳ್ಳು

ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿಯವರು ಧ್ವಜವಂದನೆ (ಸಲ್ಯೂಟ್) ಮಾಡಲಿಲ್ಲ ಎಂದು ತೋರಿಸುವ ಫೋಟೋವನ್ನು ಅನೇಕ ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದರು. ಗೊತ್ತಿದ್ದೂ ಶೇರ್ ಮಾಡಿದ್ದು ಮಾತ್ರ ನಮ್ಮ ಬಿಜೆಪಿಯ ವಕ್ತಾರ ಮಾತ್ರ.

ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿಯವರು “ದೇಶದಲ್ಲಿ ಮುಸ್ಲಿಮರಿಗೆ ಅಭದ್ರತೆ ಮನೋಭಾವ ಕಾಡುತ್ತಿದೆ” ಎಂದು ಒಂದು ಸಂದರ್ಶನದಲ್ಲಿ ಹೇಳಿದ್ದು ಬಲಪಂಥೀಯ ಅನುಯಾಯಿಗಳಿಗೆ ಸರಿ ಕಾಣಲಿಲ್ಲ ಹಾಗಾಗಿ ಹಲವಾರು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಅವರ ಬಗ್ಗೆ ಅವಹೇಳನಗಳನ್ನು ಹರಿಯಬಿಡಲು ಶುರು ಹಚ್ಚಿದ್ದರು. ಹಲವಾರು ಮಂದಿ ಹಮೀದ್ ಅನ್ಸಾರಿಯವರು ತ್ರಿವರ್ಣ ಧ್ವಜಕ್ಕೆ ಸಲ್ಯೂಟ್ ಮಾಡದೆ ನಿಂತಿರುವ ಫೋಟೋವನ್ನು ಶೇರ್ ಮಾಡಲು ತೊಡಗಿದರು. ಈ ಫೋಟೋ ಇದಕ್ಕೂ ಮುಂಚೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಇದೀಗ ಬಿಜೆಪಿಯ ವಕ್ತಾರ ಸಂಬಿತ್ ಪಾತ್ರ ಕೂಡಾ ನಕಲಿ ಚಿತ್ರವನ್ನು (ಅಥವಾ ಸುಳ್ಳು ಶೀರ್ಷಿಕೆಯ ನೈಜ ಚಿತ್ರ ಅನ್ನಬಹುದು) ಶೇರ್ ಮಾಡಿದ್ದಾರೆ. ಚಿತ್ರದಲ್ಲಿ ಆಗಿನ ರಕ್ಷಾಮಂತ್ರಿ ಮನೋಹರ್ ಪಾರಿಕ್ಕರ್, ನರೇಂದ್ರ ಮೋದಿ, ಬರಾಕ್ ಒಬಾಮ, ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಾಗೂ ಹಮೀದ್ ಅನ್ಸಾರಿಯವರನ್ನು ಕಾಣಬಹುದು. “ಪ್ರೋಟೋಕಾಲ್” ನ ಪ್ರಕಾರ, ರಾಷ್ಟ್ರಪತಿ ಪ್ರಧಾನ ಗಣ್ಯವ್ಯಕ್ತಿ ಆಗಿರುವ ಸಂದರ್ಭದಲ್ಲಿ ಉಪರಾಷ್ಟ್ರಪತಿಯಾಗಲಿ ಪ್ರಧಾನಮಂತ್ರಿಯಾಗಲಿ ಸಲ್ಯೂಟ್ (ಧ್ವಜವಂದನೆ) ಮಾಡಬಾರದು. ಅಂದರೆ ಇಲ್ಲಿ ಪ್ರೋಟೋಕಾಲ್ ನ ವಿರುದ್ಧವಾಗಿ ನಡೆದುಕೊಂಡಿದ್ದು ಮನೋಹರ್ ಪರಿಕ್ಕರ್ ಹಾಗೂ ನರೇಂದ್ರ ಮೋದಿಯವರು. ಪ್ರಣಬ್ ಮುಖರ್ಜಿಯವರು ಧ್ವಜವಂದನೆ ಮಾಡುವಾಗ ಹಮೀದ್ ಅನ್ಸಾರಿಯವರು ಪ್ರೋಟೋಕಾಲ್ ಪ್ರಕಾರ ಸಲ್ಯೂಟ್ ಮಾಡಲಿಲ್ಲ.

೨೦೦೩ರ ಗಣತಂತ್ರ ದಿವಸದ ಇನ್ನೊಂದು ಚಿತ್ರವನ್ನು ನೀವು ಗಮನಿಸಿದರೆ, ಅಂದಿನ ಪ್ರಧಾನಮಂತ್ರಿಯಾದ ಅಟಲ್ ಬಿಹಾರಿ ವಾಜಪೇಯಿಯವರು ರಾಷ್ಟ್ರಪತಿ ಅಬ್ದುಲ್ ಕಲಾಂರವರು ಧ್ವಜವಂದನೆ ಮಾಡುವಾಗ ಸಲ್ಯೂಟ್ ಮಾಡಲಿಲ್ಲ. ಅವರು ಪ್ರೋಟೋಕಾಲ್ ನ ರೀತಿಯಲ್ಲೇ ನಡೆದುಕೊಂಡಿದ್ದರು ಎಂಬುವುದನ್ನು ತಿಳಿಯಬಹುದು.

ಇದರೊಂದಿಗೆ ಬಿಜೆಪಿಯ ವಕ್ತಾರ ಸಂಬಿತ್ ಪಾತ್ರರವರು ಇನ್ನೊಂದು ಸುಳ್ಳು ಮಾಹಿತಿಯನ್ನೂ ನೀಡಿದ್ದಾರೆ. ೨೦೧೫ ರಲ್ಲಿ ನಡೆದಂತಹ ಅಂತರ್ರಾಷ್ಟ್ರೀಯ ಯೋಗ ದಿವಸದ ಸಮಾರಂಭಕ್ಕೆ ಅವರು ಬೇಕಂತಲೇ ಗೈರು ಹಾಜಾರಾಗಿದ್ರು ಎಂದು ಸುಳ್ಳು ಮಾಹಿತಿಯನ್ನು ಟ್ವೀಟ್ ಮಾಡಿದ್ದಾರೆ.

೨೦೧೫ರಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಈ ವಿಷಯವನ್ನು ತನ್ನ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದರು. ನಂತರ ಇದೆ ವಿಷಯವನ್ನು ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಕೂಡಾ ಶೇರ್ ಮಾಡಿದ್ದರು. ಆದರೆ, ಅಲ್ಲಿ ನಡೆದ ವಿಷಯವೇ ಬೇರೆ. ಹಮೀದ್ ಅನ್ಸಾರಿಯವರನ್ನು ಅಂತರ್ರಾಷ್ಟ್ರೀಯ ಯೋಗ ದಿವಸದ ಸಮಾರಂಭಕ್ಕೆ ಆಹ್ವಾನಿಸಲೇ ಇರಲಿಲ್ಲ. ನಂತರ ರಾಮ್ ಮಾಧವರ ಪರವಾಗಿ ಕೇಂದ್ರ ಸಚಿವರೊಬ್ಬರು ಕ್ಷಮೆ ಕೇಳಿದ್ದರು. ಆದರೂ ಈ “ರಿಪಬ್ಲಿಕ್ ಟಿವಿ” ಹಾಗೂ “ಝೀ ನ್ಯೂಸ್” ಚಾನೆಲ್ ನಲ್ಲಿ ಆಗಾಗ ಕಂಡು ಬಂದು ಸುಳ್ಳನ್ನೇ ಹೇಳಿ ಬಂಡವಾಳ ಗಿಟ್ಟಿಸಿಕೊಳ್ಳುವ ವ್ಯಕ್ತಿ ಈ ಸುಳ್ಳನ್ನು ಮತ್ತೆ ಹರಡಲು ಯತ್ನಿಸಿ ನಗೆಪಾಟಲಿಗೀಡಾಗಿದ್ದಾರೆ.

ಅಂತರ್ಜಾಲ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನಾಯಕರಾಗಲಿ ಬೇರೆ ಯಾರೂ ಆಗಲಿ ಪೋಸ್ಟ್ ಮಾಡುವ ಸುದ್ದಿಗಳನ್ನು ನಂಬಬೇಡಿ. ಅವುಗಳನ್ನು ನಂಬಿ ಒಂದು ಲೈಕ್ ಅಥವಾ ಕಾಮೆಂಟ್ ಮಾಡುವ ಮೊದಲು ಸ್ವಲ್ಪ ರಿಸರ್ಚ್ ಮಾಡಿ, ಗೂಗಲ್ ಮಾಡಿ, ಸ್ಮಾರ್ಟ್ ಆಗಿ. ಅಂದ ಹಾಗೆ ಬಿಜೆಪಿ ವಕ್ತಾರ ಸಂಬಿತ್ ಪಾತ್ರರವರ ನಕಲಿತನಕ್ಕೆ ಇಲ್ಲೊಂದು ಉದಾಹರಣೆ ನೋಡಿ.

ಮೂಲ: ಆಲ್ಟ್ ನ್ಯೂಸ್

What do you think?

0 points
Upvote Downvote

Total votes: 0

Upvotes: 0

Upvotes percentage: 0.000000%

Downvotes: 0

Downvotes percentage: 0.000000%

Comments

Leave a Reply

Your email address will not be published. Required fields are marked *

Loading…

Loading…

ತನ್ನ ಗೆಳತಿಯ ಮನೆಯಲ್ಲಿದ್ದಾಗ ಹೂಸನ್ನು ಹಿಡಿದಿಟ್ಟುಕೊಂಡು ಅರ್ಜೆಂಟೀನಾದಲ್ಲಿ ಸತ್ತ ವ್ಯಕ್ತಿ – ಹೀಗೂ ಒಂದು ತಮಾಷೆಯ ವೈರಲ್ ಸ್ಟೋರಿ

ಆಂಗ್ಲ ಭಾಷೆಯಲ್ಲಿ ಸುಳ್ಳು ಸುದ್ದಿಗಳನ್ನು ಪ್ರಕಟಿಸುವ ಕುಖ್ಯಾತ Postcard News ವೆಬ್ಸೈಟಿನ ಕೂಸು “Postcard ಕನ್ನಡ”