in

ತನ್ನ ಗೆಳತಿಯ ಮನೆಯಲ್ಲಿದ್ದಾಗ ಹೂಸನ್ನು ಹಿಡಿದಿಟ್ಟುಕೊಂಡು ಅರ್ಜೆಂಟೀನಾದಲ್ಲಿ ಸತ್ತ ವ್ಯಕ್ತಿ – ಹೀಗೂ ಒಂದು ತಮಾಷೆಯ ವೈರಲ್ ಸ್ಟೋರಿ

ಈ ವಾರ್ತೆಯನ್ನು ಮೊದಲು ಒಂದು ಫೇಸ್ಬುಕ್ ಪೇಜು ಪೋಸ್ಟ್ ನ ಮೂಲಕ ಪ್ರಕಟಿಸಿತ್ತು ಅದನ್ನು ಸುಮಾರು ಹತ್ತು ಸಾವಿರ ಬಾರಿ ಶೇರ್ ಮಾಡಲಾಯಿತು. ನಂತರ ಈ ಸುದ್ದಿಯನ್ನು ಕೆಲವು ವೆಬ್ಸೈಟ್ ಗಳಲ್ಲಿ ಪ್ರಕಟಿಸಿ ಅದು ಇನ್ನೂ ಹೆಚ್ಚು ಬಾರಿ ಶೇರ್ ಆಯಿತು.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಶೇರ್ ಆಗುತ್ತಿರುವ ಒಂದು ವಾರ್ತೆಯ ಪ್ರಕಾರ ಅರ್ಜೆಂಟೀನಾದಲ್ಲಿ ಒಬ್ಬ ಯುವಕ ಒಂದು ಅಸಾಮಾನ್ಯ ಕಾರಣಕ್ಕಾಗಿ ಸಾವನ್ನಪ್ಪುತ್ತಾನೆ. ಆ ಕಾರಣವೇನೆಂದರೆ, ಅರ್ಜೆಂಟೀನಾದಲ್ಲಿ ತನ್ನ ಗೆಳತಿಯ ಮನೆಯಲ್ಲಿರುವಾಗ ತನಗೆ ಜೋರಾಗಿ ಹೂಸು ಬರುತ್ತಿದ್ದದ್ದನ್ನು ಹಿಡಿದಿಟ್ಟ ಪರಿಣಾಮವಾಗಿ “ಪೆರಿಟೋನಿಟಿಸ್” ಎಂಬ ವೈದ್ಯಕೀಯ ಸ್ಥಿತಿಯಿಂದಾಗಿ ಆತನು ಸಾವನ್ನಪ್ಪುತ್ತಾನೆ ಎಂದು. ತುಂಬಾ ತಮಾಷೆಯ ವಾರ್ತೆಯಾದರೂ ಇದೊಂದು ಸುಳ್ಳು ವಾರ್ತೆ ಎಂಬುದು ಹೇಗೆ ಎಂದು ನೋಡೋಣ.

8Shit ಡಾಟ್ ಕಾಂ ಎಂಬ ವೆಬ್ಸೈಟ್ ಈ ವಾರ್ತೆಯನ್ನು ಪ್ರಕಟಿಸಿದ ನಂತರ ಇದು ಹೆಚ್ಚು ಶೇರ್ ಹೊಂದಿತು. ಫೇಸ್ಬುಕ್ ನಲ್ಲಿ ಈ ವಾರ್ತೆ ಹೆಚ್ಚು ಹರಡಿತು. ಒಂದು ತಮಾಷೆಯ ವಾರ್ತೆಯಾದ್ದರಿಂದ ಜನರು ಇದನ್ನು ಸುಮ್ಮನೆ ಶೇರ್ ಮಾಡಲು ಆರಂಭಿಸಿದರೋ ಏನೊ. ಆ ಲೇಖನದಲ್ಲಿ ಈ ರೀತಿ ಬರೆದಿತ್ತು:

“Jorge Caradeculito went to visit his girlfriend at lunch and had lunch with her and her mother. Unfortunately, the food was not was he was used to eat. Shortly after, he got the need to start farting, but he didn’t want to have an embarrassing moment in his girlfriend’s house, so he started holding them.“

ಇದರ ಅನುವಾದ: ಮಧ್ಯಾಹ್ನದ ಊಟಕ್ಕಾಗಿ ತನ್ನ ಗೆಳತಿಯಿಂದ ಬಂದ ಆಹ್ವಾನದ ಮೇರೆಗೆ ಜಾರ್ಜ್ ಕ್ಯಾರಡುಕ್ಲಿಟೊ ಎಂಬ ವ್ಯಕ್ತಿ ಅಲ್ಲಿಗೆ ಹೋಗಿದ್ದನು. ಆದರೆ ಅಲ್ಲಿ ನೀಡಲಾದ ಆಹಾರವು ತಾನು ಯಾವಾಗಲೂ ತಿನ್ನುವಂತಹ ಆಹಾರವಾಗಲಿಲ್ಲವಾದುದ್ದರಿಂದ ಆತನ ಹೊಟ್ಟೆ ಹಾಳಾಗಿ ಹೂಸು (ಅನಿಲ) ಬರಲು ತೊಡಗಿದ ಸಂದರ್ಭ ಆತನಿಗೆ ಮುಜುಗರವಾಗಿ ಅದನ್ನು ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸಿದನು.

ಇಲ್ಲಿ ನೀವು ತಿಳಿಯಬೇಕಾದ ವಿಷಯವೆಂದರೆ, ಈ ವಾರ್ತೆಯನ್ನು ಆಗಸ್ಟ್ ಒಂದರನು ಪ್ರಕಟಿಸಿದ “8Shit” ಎಂಬ ವೆಬ್ಸೈಟ್ ಒಂದು ವಿಡಂಬನೆಯ ವೆಬ್ಸೈಟ್ ಆಗಿದ್ದು ಕೇವಲ ತಮಾಷೆಯ ವೈರಲ್ ಕಥೆಗಳನ್ನು ಪೋಸ್ಟ್ ಮಾಡುತ್ತದೆ. ಆದರೆ ಎಲ್ಲಕ್ಕಿಂತಲೂ ಈ ವಾರ್ತೆ ಮಾತ್ರ ನಿಜವಾದ ವಾರ್ತೆ ತರಹ ಸಾಮಾಜಿಕ ಜಾಲತಾಣಗಳಲ್ಲಿ ಪಸರಿಸಿತು.

ಇದಕ್ಕಿಂತಲೂ ಮೊದಲು “MeMedios Obregón” ಎಂಬ ಮೆಕ್ಸಿಕೋದ ಫೇಸ್ಬುಕ್ ಪೇಜ್ (ತಮಾಷೆ ಹಾಗೂ ಮಿಮ್ಸ್ ಪೋಸ್ಟ್ ಮಾಡುವ ಪೇಜ್) ಜೂಲೈ 21ರಂದು ಪೋಸ್ಟ್ ಮಾಡಿತ್ತು. ಈ ಪೋಸ್ಟ್ ಸುಮಾರು ಹತ್ತು ಸಾವಿರ ಬಾರಿ ಶೇರ್ ಹೊಂದಿ, 4,500 ಕಾಮೆಂಟ್ಸ್ ಹಾಗೂ 4,200 ಲೈಕ್ಸ್ ಪಡೆದುಕೊಂಡಿತು. ನಂತರ ಇದು ಜುಲೈ 27 ರಂದು “Informate Diario” ಎಂಬ ಡೊಮಿನಿಕನ್ ವೆಬ್ಸೈಟ್ನಲ್ಲಿ ಕಂಡುಬಂದಿದೆ ಮತ್ತು ಜುಲೈ 31 ರಂದು ಬ್ರೆಜಿಲಿಯನ್ ವೆಬ್ಸೈಟ್ “O Observador” ನಲ್ಲಿ ಪ್ರಕಟಗೊಂಡಿತು. ಆ ಲೇಖನಗಳು ಅರ್ಜೆಂಟೈನಾದ ಸ್ಯಾನ್ ಕಾರ್ಲೋಸ್, ಮೆಕ್ಸಿಕೊದಲ್ಲಿ ಘಟನೆ ಸ್ಥಳವನ್ನು ಉಲ್ಲೇಖಿಸಿವೆ.

ನೋಡ್ರಪ್ಪಾ, ನಾಳೆ ಇದು ನಮ್ಮ ಮೈಸೂರೊ, ಮಂಡ್ಯದ್ದೋ ಅಥವಾ ಬೆಂಗಳೂರಿನಲ್ಲಿ ನಡೆದ ಘಟನೆಯೆಂದೋ ಶೇರ್ ಹೊಂದಬಹುದು. ಸ್ವಲ್ಪ ಜಾಗೃತರಾಗಿರಿ. ಅದಕ್ಕೆ ಹೇಳುವುದು, ಫೇಸ್ಬುಕ್ ಅಥವಾ ವಾಟ್ಸಪ್ಪಿನಲ್ಲಿ ಬರುವ ಎಲ್ಲ ವಾರ್ತೆಗಳನ್ನೋ ಸಂದೇಶಗಳನ್ನೋ ನಂಬಬೇಡಿ ಎಂದು. ಈವಾಗ, ಈ ಪೋಸ್ಟನ್ನು ಶೇರ್ ಮಾಡಿ ಹಾಗೂ ನಿಮ್ಮ ಸ್ನೇಹಿತರನ್ನು ಸ್ಮಾರ್ಟ್ ಆಗಿ ಪರಿವರ್ತಿಸಿ.

ಫೇಸ್ಬುಕ್ ಪೇಜ್ ನಲ್ಲಿ ಶೇರ್ ಮಾಡಿದ ಮೂಲ (ಸುಳ್ಳು ವಾರ್ತೆ) ಪೋಸ್ಟನ್ನು ಕೆಳಗಡೆ ಎಂಬೆಡ್ ಮಾಡಲಾಗಿದೆ.

8Shit archive link. Informate Diario archive link.

What do you think?

0 points
Upvote Downvote

Total votes: 0

Upvotes: 0

Upvotes percentage: 0.000000%

Downvotes: 0

Downvotes percentage: 0.000000%

Comments

Leave a Reply

Your email address will not be published. Required fields are marked *

Loading…

Loading…

ನದಿಗೆ ಮಿಂಚು ಬಡಿಯುವ ವಿಡಿಯೋ ಹಾಗೂ ಅದರ ಹಿಂದಿನ ಸತ್ಯ

ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿಯವರ ಫೋಟೋ ಹಾಗೂ ಬಿಜೆಪಿ ವಕ್ತಾರ ಸಂಬಿತ್ ಪಾತ್ರನ ಸುಳ್ಳು