in

ನದಿಗೆ ಮಿಂಚು ಬಡಿಯುವ ವಿಡಿಯೋ ಹಾಗೂ ಅದರ ಹಿಂದಿನ ಸತ್ಯ

ಈ ವಿಡಿಯೋ ಫೇಸ್ಬುಕ್ ನಲ್ಲಿ ಇತ್ತೀಚಿಗೆ ತುಂಬಾ ವೈರಲ್ ಆಗಿದೆ ಹಾಗೂ ಜನರು ವಾಟ್ಸಪ್ಪಿನಲ್ಲಿ ಕೂಡ ಶೇರ್ ಮಾಡಲು ತೊಡಗಿದ್ದಾರೆ. ನಂಗೂ ಈ ವಿಡಿಯೋ ವಾಟ್ಸಪ್ಪಿನಲ್ಲಿ ಬಂದಿದೆ!

ಅದಕ್ಕೇ ಹೇಳುವುದು, ವಾಟ್ಸಪ್ಪಿನಲ್ಲಿ ಅಥವಾ ಫೇಸ್ಬುಕ್ನಲ್ಲಿ ನೋಡಿದ ವಿಡಿಯೋಗಳನ್ನೆಲ್ಲ ನಿಜವೆಂದು ನಂಬಬಾರದು. ಅದೇ ರೀತಿ ಯಾವುದೇ ಸಾಮಾಜಿಕ ತಾಣಗಳಲ್ಲಿ ಓದುವ ಅಥವಾ ನೋಡುವ ಸುದ್ದಿ ಸಂದೇಶಗಳನ್ನು ನಿಜವೆಂದು ನಂಬಲೂ ಬಾರದು. ನಿಮಗೆ ಒಂದು ವಿಡಿಯೋ ವಾಟ್ಸಪ್ಪಿನಲ್ಲಿ ಬಂದಿರಬಹುದು ಅದರಲ್ಲಿ ಒಂದು ಶಾಂತವಾದ ನದಿಗೆ ಇದ್ದಕ್ಕಿದ್ದಂತೆ ಕೆಂಪು ಬಣ್ಣದ ಮಿಂಚು ಬಡಿದು ನದಿಯು ಸಂಪೂರ್ಣ ತಲ್ಲಣಗೊಂಡು ಸ್ಪೋಟಗೊಳ್ಳುತ್ತದೆ. ಇಲ್ಲಿದೆ ಓದಿ ಇದರ ಸತ್ಯ.

ಹಾರ್ಡಿ ಥಾಮಸ್ ಎಂಬವರು ಆಗಸ್ಟ್ ಒಂದರಂದು ಫೇಸ್ಬುಕ್ ನಲ್ಲಿ “ನದಿಗೆ ಬಡಿಯುವ ಮಿಂಚು” ಎಂಬ ಶೀರ್ಷಿಕೆಯಡಿಯಲ್ಲಿ ಒಂದು ವಿಡಿಯೋ ಶೇರ್ ಮಾಡುತ್ತಾರೆ. ನೋಡ ನೋಡುತ್ತಿದ್ದಂತೆ ಈ ವಿಡಿಯೋವನ್ನು ಎರಡು ಕೋಟಿಗಿಂತಲೂ ಹೆಚ್ಚು ಮಂದಿ ವೀಕ್ಷಿಸುತ್ತಾರೆ, ಎಂಟು ಲಕ್ಷಕ್ಕೂ ಹೆಚ್ಚು ಬಾರಿ ಶೇರ್ ಆಗುತ್ತೆ, ಒಂದು ಲಕ್ಷಕ್ಕೂ ಹೆಚ್ಚು ಲೈಕ್ ಪಡೆದುಕೊಳ್ಳುತ್ತದೆ.

ಆದರೆ ನಿಜಕ್ಕೂ ಅಲ್ಲಿ ನಡೆದಿದ್ದೇನು? ಇನ್ನೂ ಸ್ವಲ್ಪ ಹುಡುಕಾಡಿದಾಗ, ಈ ವಿಡಿಯೋವನ್ನು ನೀವು ಯೂಟ್ಯೂಬ್ ನಲ್ಲಿ ಕಾಣಬಹುದು. ಮೂಲ (source) ವಿಡಿಯೋವನ್ನು ಡಿಸೆಂಬರ್ 2012 ರಲ್ಲಿ ಅಪ್ಲೋಡ್ ಮಾಡಲಾಗಿದೆ. ಆ ವಿಡಿಯೋವನ್ನು ಕೆಳಗೆ ಎಂಬೆಡ್ ಮಾಡಲಾಗಿದೆ. Rannikon Merityö ಎಂಬ ಫ್ರಾನ್ಸಿನ ಕಂಪೆನಿಯೊಂದು ಈ ವಿಡಿಯೋವನ್ನು ಅಪ್ಲೋಡ್ ಮಾಡಿದೆ.

Rannikon Merityö ಕಂಪೆನಿಯು ನಿರ್ಮಾಣ ಹಾಗೂ ಗಣಿಗಾರಿಕೆಯನ್ನು ನಡೆಸುತ್ತದೆ. ಈ ವಿಡಿಯೋವನ್ನು ಅದರ ವೆಬ್ಸೈಟಿನಲ್ಲಿ “ನೀರಿನೊಳಗಿನ ಗಣಿಗಾರಿಕೆ ಹಾಗೂ ಸ್ಫೋಟ” ಎಂಬ ಶೀರ್ಷಿಕೆಯಡಿಯಲ್ಲಿ ತೋರಿಸಲಾಗಿದೆ. ಮೂಲ ವಿಡಿಯೋವಿನ ಶೀರ್ಷಿಕೆ ಕೂಡ ಇದೇ ಆಗಿದೆ. ಅಂದರೆ, ಇದೊಂದು ನಿಯಂತ್ರಿತ ಸ್ಪೋಟವಾಗಿದೆ.

ವಿಡಿಯೋವನ್ನು ಸೂಕ್ಷ್ಮದಿಂದ ಗಮನಿಸಿದಾಗ ಮಿಂಚಿನಂತೆ ತೋರುವ ಒಂದು ಬೆಳಕು ನದಿಯ ಬದಿಗಿರುವ ಒಂದು ಗುಡ್ಡೆಯಿಂದ ಬರುವುದನ್ನು ಗಮನಿಸಬಹುದು. ಮಿಂಚು ಬಂದಿದ್ದರೆ ಆಕಾಶದಲ್ಲಿ ಅಥವಾ ಮೋಡಗಳ್ಲಲಿ ಬೆಳಕನ್ನು ಕಾಣಬಹುದಿತ್ತು. ಇಲ್ಲಿ, ನದಿಯ ನೀರಿನ ಅಡಿಯಲ್ಲಿ ನಿಯಂತ್ರಿತವಾಗಿ ಸ್ಪೋಟಕವನ್ನು ಇಟ್ಟು ಅದನ್ನು ಸ್ಪೋಟಿಸಲಾಗಿದೆ, ಹಾಗಾಗಿಯೇ ಮೊದಲು ಮಿಚಿನಂತೆ ತೋರಿ ನಂತರ ನೀರಿನ ಅಡಿಯಲ್ಲಿ ಒಂದೊಂದಾಗಿ ಸ್ಫೋಟ ಉಂಟಾಗುವುದನ್ನು ಕಾಣಬಹುದು.

ಈ ಲೇಖನವನ್ನು ನಿಮ್ಮ ಸ್ನೇಹಿತರಿಗೆ ಶೇರ್ಇ ಮಾಡಿ ಹಾಗೂ ಇನ್ನೂ ಇಂತಹ ಅನೇಕ ಸುಳ್ಳು ಸುದ್ದಿಗಳ ಸತ್ಯಾಸತ್ಯತೆಯನ್ನು ತಿಳಿಯಲು ನಮ್ಮ ಫೇಸ್ಬುಕ್ ಪೇಜ್ ಅನ್ನು ಲೈಕ್ ಮಾಡಿ – The Fake Buster – ಕನ್ನಡ.

ಅತ್ಯಧಿಕ ಬಾರಿ ಶೇರ್ ಆದ ಸುಳ್ಳು ಫೇಸ್ಬುಕ್ ವೀಡಿಯೊವಿನ ಲಿಂಕ್ ಇಲ್ಲಿದೆ.

What do you think?

0 points
Upvote Downvote

Total votes: 0

Upvotes: 0

Upvotes percentage: 0.000000%

Downvotes: 0

Downvotes percentage: 0.000000%

Comments

Leave a Reply

Your email address will not be published. Required fields are marked *

Loading…

Loading…

ಜವಾಹರ್ ಲಾಲ್ ನೆಹರೂ, ಅಂಬೇಡ್ಕರ್, ಮಹಾತ್ಮಾ ಗಾಂಧಿಯವರ ಸೀಕ್ರೆಟ್ ಫೋಟೋಗಳು ಹಾಗೂ ಆ ಫೋಟೋಗಳ ರಹಸ್ಯ

ತನ್ನ ಗೆಳತಿಯ ಮನೆಯಲ್ಲಿದ್ದಾಗ ಹೂಸನ್ನು ಹಿಡಿದಿಟ್ಟುಕೊಂಡು ಅರ್ಜೆಂಟೀನಾದಲ್ಲಿ ಸತ್ತ ವ್ಯಕ್ತಿ – ಹೀಗೂ ಒಂದು ತಮಾಷೆಯ ವೈರಲ್ ಸ್ಟೋರಿ