in

ಜವಾಹರ್ ಲಾಲ್ ನೆಹರೂ, ಅಂಬೇಡ್ಕರ್, ಮಹಾತ್ಮಾ ಗಾಂಧಿಯವರ ಸೀಕ್ರೆಟ್ ಫೋಟೋಗಳು ಹಾಗೂ ಆ ಫೋಟೋಗಳ ರಹಸ್ಯ

ಮಹಾತ್ಮ ಗಾಂಧಿ, ಅಂಬೇಡ್ಕರ್ ಹಾಗೂ ಜವಾಹರ್ ಲಾಲ್ ನೆಹರೂರವರ ಹಲವಾರು ಫೋಟೋಗಳು ಸಾಮಾಜಿಕ ಜಾಲತಾಣ ಹಾಗೂ ವಾಟ್ಸಪ್ಪ್ ನಲ್ಲಿ ಶೇರ್ ಮಾಡಲಾಗುತ್ತಿವೆ. ಅಮಾಯಕ ಜನರು ಇಂತಹ ಫೋಟೋಗಳ ಬಗ್ಗೆ ಏನೂ ಸಂಶೋಧನೆ ಮಾಡದೆ ನಂಬಿ ಇನ್ನೂ ಶೇರ್ ಮಾಡುತ್ತಿದ್ದಾರೆ.

ಈ ಲೇಖನದಲ್ಲಿ ಹಾಕಿರುವಂತಹ ಫೋಟೋಗಳು ಕೇವಲ ಒಂದೆರಡು ಉದಾಹರಣೆ ಮಾತ್ರ. ಇಂತಹ ಹಲವಾರು ಫೋಟೋಶಾಪ್ ಮಾಡಿರುವಂತಹ ಚಿತ್ರಗಳನ್ನು ಹಾಗೂ ಪೋಸ್ಟ್ ಗಳನ್ನೂ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಟ್ವಿಟ್ಟರ್ ಹಾಗೂ ಮೆಸೇಜ್ ಮಾಡಲು ಬಳಸುವ ವಾಟ್ಸಪ್ಪ್ ನಲ್ಲಿ ಶೇರ್ ಮಾಡಲಾಗುತ್ತಿದೆ.

ಕೇವಲ ಒಂದೇ ತರಹದ ಸಿದ್ಧಾಂತಗಳನ್ನು ಪಾಲಿಸಿದಂತಹಾ ಜನರನ್ನು ಗುರಿಯನ್ನಾಗಿ ತೋರಿಸಿ ಇಂತಹಾ ಫೋಟೋಶಾಪ್ ಮಾಡಿದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಡಲಾಗುತ್ತಿವೆ. ಹೆಚ್ಚಾಗಿ ಇಂತಹಾ ಚಟುವಟಿಕೆಗಳನ್ನು ಬಲ ಪಂಥೀಯ ಫೇಸ್ಬುಕ್ ಪೇಜ್ ಹಾಗೂ ಗ್ರೂಪ್ ಗಳಲ್ಲಿ ಕಾಣಸಿಗುತ್ತಿವೆ.

ಇದು ಒಂದು ವ್ಯವಸ್ಥಿತ ಪ್ರಯತ್ನವೆನ್ನುವುದಕ್ಕೆ ಸಾಕಷ್ಟು ಪುರಾವೆಗಳಿವೆ. ಬುದ್ಧಿವಂತ ಜನರು ಇಂತಹಾ ಫೋಟೋಶಾಪ್ ಫೋಟೋಗಳನ್ನು ನಂಬದೆ ಅಂತವರನ್ನು ಸರಿ ದಾರಿಗೆ ತರಬೇಕು ಹಾಗೂ ತಮ್ಮ ಬಂಧು ಮಿತ್ರರಿಗೆ ಇದರ ಬಗ್ಗೆ ಅರಿವನ್ನು ಮೂಡಿಸಬೇಕು.

ಇಲ್ಲಿ ತೋರಿಸಿರುವ ಎರಡನೇ ಚಿತ್ರದ ಎಡಭಾಗದಲ್ಲಿ ನೆಹರೂರವರ ಭಾವಚಿತ್ರವನ್ನು ಫೋಟೋಶಾಪ್ ಮಾಡಲಾಗಿದೆ.
ನೆಹರುರೊಂದಿಗೆ ನಡೆಸುತ್ತಿರುವ ಒಂದು ಸಭೆಯ ಚಿತ್ರದಲ್ಲಿ ನೆಹರುರವರನ್ನು ಅಳಿಸಿ ಹಾಕಿ ಒಂದು ಮಹಿಳೆಯ ಚಿತ್ರವನ್ನು ಫೋಟೋಶಾಪ್ ಮಾಡಲಾಗಿದೆ.
ಅಂಬೇಡ್ಕರ್ ಹಾಗೂ ಗಾಂಧೀಜಿಯವರ ಎರಡು ಪ್ರತ್ಯೇಕ ಫೋಟೋಗಳನ್ನು ಫೋಟೋಶಾಪ್ ಮಾಡಿ ಒಂದು ನಕಲಿ ಚಿತ್ರವನ್ನು ಶೃಷ್ಟಿಸಲಾಗಿದೆ.
ಇದು ಮಹಾತ್ಮಗಾಂಧಿಯವರ ಫೋಟೋ ಅಲ್ಲ. ಆಸ್ಟ್ರೇಲಿಯಾದ ನಟನೊಬ್ಬ ಗಾಂಧೀಜಿಯ ವೇಷ ಧರಿಸಿ ಅಲ್ಲಿ ನಡೆದ ಒಂದು ಸಮಾಜಸೇವಾ ಸಮಾರಂಭದಲ್ಲಿ ಕಂಡುಬಂದ ದೃಶ್ಯ.
ಇದು ಮಹಾತ್ಮಗಾಂಧಿಯವರ ಹತ್ಯೆಯ ಫೋಟೋ ಅಲ್ಲ. ಇದು ಒಂದು ಸಿನಿಮಾದ ಸ್ಥಿರ ಚಿತ್ರ. ಇಲ್ಲಿ ಕಾಣುತ್ತಿರುವುದು ಮಹಾತ್ಮ ಗಾಂಧಿಯೋ ಅಥವಾ ಕೊಲೆಗಾರ ನಾಥುರಾಮ್ ಗೋಡ್ಸೆನೋ ಅಲ್ಲ – ಇವರು ಚಿತ್ರ ನಟರು ಅಷ್ಟೇ.

ನಿಮಗೂ ಇಂತಹದ್ದೇ ಫೋಟೋಶಾಪ್ ಮಾಡಿರುವಂತಹ ಫೋಟೋಗಳು ಹಾಗೂ ಅದರ ನೈಜ ಚಿತ್ರಗಳು ಸಿಕ್ಕಿದ್ದಲ್ಲಿ ದಯವಿಟ್ಟು ನಮಗೆ ಕಳುಹಿಸಿಕೊಡಿ (visit contact page) ಅಥವಾ ಕೆಳಗಡೆ ಕಾಮೆಂಟ್ಸ್ ಮಾಡಿ. ತಾವು ಈ ಪೋಸ್ಟನ್ನು ತಮ್ಮ ಫೇಸ್ಬುಕ್ ಅಕೌಂಟ್ ನಲ್ಲಿ ಹಾಗೂ ವಾಟ್ಸಪ್ಪಿನಲ್ಲಿ ಶೇರ್ ಮಾಡಿ ಜನರಲ್ಲಿ ತಿಳುವಳಿಕೆ ಮೂಡಿಸಲು ನಮ್ಮ ಪ್ರಯತ್ನಕ್ಕೆ ಸಹಾಯ ಮಾಡಿ. ಧನ್ಯವಾದಗಳು.

What do you think?

0 points
Upvote Downvote

Total votes: 0

Upvotes: 0

Upvotes percentage: 0.000000%

Downvotes: 0

Downvotes percentage: 0.000000%

Comments

Leave a Reply

Your email address will not be published. Required fields are marked *

Loading…

Loading…

160 ಕೆಜಿಯ ಶಿವನ ಬಂಗಾರದ ಮೂರ್ತಿ, ಸಾವಿರಾರು ಹಾವುಗಳು, ಶೀಘ್ರವೇ ದೇವಾಲಯ – ವೈರಲ್ ಸುದ್ದಿಯ ಸತ್ಯ ಏನು?

ನದಿಗೆ ಮಿಂಚು ಬಡಿಯುವ ವಿಡಿಯೋ ಹಾಗೂ ಅದರ ಹಿಂದಿನ ಸತ್ಯ