in ,

160 ಕೆಜಿಯ ಶಿವನ ಬಂಗಾರದ ಮೂರ್ತಿ, ಸಾವಿರಾರು ಹಾವುಗಳು, ಶೀಘ್ರವೇ ದೇವಾಲಯ – ವೈರಲ್ ಸುದ್ದಿಯ ಸತ್ಯ ಏನು?

ಶಿವ ಶಿವಾ! ಒಂದು ವಿಡಿಯೋ, ಎರಡು ಫೋಟೋಗಳು, ನೂರಾರು ಕಥೆಗಳು, ಎಲ್ಲೆಲ್ಲೂ ನೀನೆ “ಬಂಗಾರದ ಶಿವ,” ಜನ ಮರುಳೋ ಜಾತ್ರೆ ಮರುಳೋ ಅಂತ ಶೇರ್ ಮಾಡ್ತಾ ಇದ್ದಾರೆ ಶಿವಾ!

ಬಿಹಾರದ ರತ್ನಪುರಿಯಲ್ಲಿ ಒಂದು ಮನೆಯನ್ನು ಕಟ್ಟಲು ಗುಂಡಿ ತೋಡುವಾಗ ಒಂದು 160kg ತೂಕದ ಶಿವನ ಬಂಗಾರದ ಮೂರ್ತಿ ಸಿಕ್ತಂತೆ, ಅದರ ಹತ್ತಿರ ಸಾವಿರಾರು ಹಾವುಗಳು ಇತ್ತಂತೆ, ಜನರು ಅಲ್ಲಿದ್ದ ಹಾವುಗಳನ್ನು ಭಕ್ತಿಯಿಂದ ಒಬ್ಬೊಬ್ಬರೇ ಎತ್ತಿಕೊಂಡು ಮೆರವಣಿಗೆ ಮಾಡಿದರಂತೆ, ಶೀಘ್ರವೇ ಅಲ್ಲಿ ಒಂದು ಶಿವನ ದೇವಾಲಯ ನಿರ್ಮಿಸಲಾಗುವುದಂತೆ! – ಹೀಗೆ ಎಲ್ಲಾ ಕಡೆ ವಾಟ್ಸಪ್ಪಿನಲ್ಲಿ, ಫೇಸ್ಬುಕ್ ನಲ್ಲಿ, ಯೂಟ್ಯೂಬಿನಲ್ಲಿ ಹಾಗೂ ಇನ್ನು ಎಲ್ಲೆಲ್ಲೋ ಒಂದು ಸುದ್ದಿ ಶೇರ್ ಆಗುತ್ತಲಿದೆ.

ಇದು ನಮ್ಮ ಕನ್ನಡ ಭಾಷಿಕರು ಹರಡುತ್ತಿರುವ ಸುದ್ದಿಯಾದರೆ, ಹಿಂದಿ ಭಾಷಿಕರದ್ದು ಇನ್ನೊಂದು ಸ್ಟೋರಿ. ಇದು ಹಾವುಗಳನ್ನು ಹಿಡಿದುಕೊಂಡು ಹೋಗುವುದು ಅಮರನಾಥ ಯಾತ್ರೆಯಲ್ಲಿ ಅಂತೆ. ಇನ್ನೇನೇನೋ ಸ್ಟೋರಿ ಶಿವಾ!

ಕನ್ನಡದಲ್ಲಿ ಬಂದಿರುವಂತಹ ಮೆಸೇಜು ಹೀಗಿದೆ ನೋಡಿ:

ಬಿಹಾರದಲ್ಲಿರುವ ರತ್ನಪುರಿ ಎಂಬಲ್ಲಿ, ಮನೆ ಕಟ್ಟುವ ಸಲುವಾಗಿ, ಪಾಯ ಅಗೆಯುವ ಸಂಧರ್ಭದಲ್ಲಿ, ೧೬೦ ಕೆಜಿ ತೂಕವಿರುವ ಚಿನ್ನದ ಶಿವನ ವಿಗ್ರಹ ದೊರೆತಿದೆ. ಆ ವಿಗ್ರಹದ ಸುತ್ತಲೂ ಸಾವಿರಾರು ಹಾವುಗಳು ಆ ವಿಗ್ರಹವನ್ನು ಕಾಯುತ್ತಿದ್ದವು.
ಪೋಲಿಸರು ಆ ವಿಗ್ರಹವನ್ನು ಜಪ್ತಿ ಮಾಡುವ ಸಮಯದಲ್ಲಿ, ಆ ಹಾವುಗಳು ಯಾರಿಗೂ ಏನನ್ನೂ ತೊಂದರೆ ಮಾಡದಿರುವುದು, ಹಾಗೂ ಆ ಹಾವುಗಳನ್ನು ಅಲ್ಲಿಯ ಗ್ರಾಮಸ್ಥರು, ಕೈಯಲ್ಲಿ ಹಿಡಿದು ಕೊಂಡು ಹೋಗುತ್ತಿರುವುದು ಅತ್ಯಾಶ್ಚರ್ಯವಾಗಿದೆ…
ಮುಂದೆ ಆ ಜಾಗದಲ್ಲಿ ಶಿವನ ದೇವಸ್ಥಾನ ನಿರ್ಮಿಸಲು ನಿರ್ಧರಿಸಲಾಗಿದೆ…
ಓಂ ನಮಃ ಶಿವಾಯ…

ನಿಜವಾಗಿ ಇದರ ಅಸಲಿಯತ್ತು ಏನು? ಹಾವುಗಳನ್ನು ಎತ್ತಿಕೊಂಡು ಹೋಗುವ ಜನರ ವಿಡಿಯೋ ಹಾಗೂ ಪೊಲೀಸ್ ಜೀಪಿನಲ್ಲಿ ಇತ್ತ ಬಂಗಾರದಂತೆ ಕಾಣುವ ಶಿವನ ಮೂರ್ತಿ ಕಥೆಗೂ ಏನು ಸಂಬಂಧ? ಕೆಳಗೆ ಓದಿ ನೋಡಿ. ಸಂಕ್ಷಿಪ್ತವಾಗಿ ಬರೀತೀನಿ ಓದಿ. ಹೆಚ್ಚಿನ ಮಾಹಿತಿಗಾಗಿ ನಾನು ವಿವರವಾಗಿ ಆಂಗ್ಲ ಭಾಷೆಯಲ್ಲಿ ಬರೆದ ಲೇಖನವನ್ನು ಓದಿ. (ಲಿಂಕ್ ಈ ಲೇಖನದ ಕೆಳಗಡೆ ನೀಡಲಾಗಿದೆ)

ಹಾವನ್ನು ಹಿಡಿದುಕೊಂಡು ಹೋಗ್ತಾ ಇರೋದು ಬಿಹಾರದಲ್ಲಿ ಹೌದು. ನಾಗರ ಪಂಚಮಿ ಹಬ್ಬದ ಸಂದರ್ಭದಲ್ಲಿ ಹೀಗೆ ಹಾವುಗಳನ್ನು ಹಿಡಿದುಕೊಂಡು ಜಾತ್ರೆಯಲ್ಲಿ ಮೆರವಣಿಗೆ ಹೋಗುವುದು ಬಿಹಾರದ ಹಲವು ಕಡೆ ಒಂದು ವಾಡಿಕೆ. ಬಿಹಾರದ ದರ್ಭಂಗ ಹಾಗೂ
ಸಮಸ್ತಿಪುರದಲ್ಲಿ ಹೀಗೆ ನಡೆದ ವಿದ್ಯಮಾನಗಳ ಕುರಿತು ಎರಡು ಮೀಡಿಯಾ ರಿಪೋರ್ಟ್ ಮಾಡಿದ ವಿಡಿಯೋಗಳು ಸಿಕ್ಕಿವೆ. ಆದರೆ ಇದು ಯಾವುದೇ ಶಿವಮೂರ್ತಿಯ ಹತ್ತಿರ ಸಿಕ್ಕಿದ್ದಲ್ಲ. ಯಾವುದೇ ಮನೆ ಕಟ್ಟುವಾಗ ಎಲ್ಲಿಯೂ ಸಾವಿರಾರು ಹಾವುಗಳು ಸಿಕ್ಕಿಲ್ಲ.

ಆದರೆ ಏನಿದು ಬಂಗಾರದ ಶಿವ ಮೂರ್ತಿಯ ಕಥೆ? ಅಸಲಿಗೆ ಇದೊಂದು ಬಂಗಾರದ ಮೂರ್ತಿಯೇ ಅಲ್ಲ. ಇದು ಕಂಡು ಬಂದಿದ್ದು ರಾಜಸ್ಥಾನದ ರತ್ನಾಪುರ ಎಂಬ ಹಳ್ಳಿಯಲ್ಲಿರುವ ರೈಲು ಹಳಿಯ ಬಳಿ ಇರುವ ಒಂದು ಪೊದೆಯಲ್ಲಿ. ಬಂಗಾರವಲ್ಲವೆಂದು ಅರಿತ ನಂತರ ಈ ಮೂರ್ತಿಯನ್ನು ಯಾರೋ ಕಳ್ಳರು ಅಲ್ಲಿ ಎಸೆದು ಹೋಗಿರಬಹುದು ಎಂದು ಪೊಲೀಸರು ತಿಳಿಸುವ ವೇಳೆಗೆ, ಗುಜರಾತಿನ ಬಲರಾಮ ದೇವಸ್ಥಾನದಿಂದ ಕದ್ದು ಹೋದ ಮೂರ್ತಿಯು ಇದೇ ಎಂದು ಮಾಹಿತಿ ಸಿಕ್ಕಿದೆ. ಇದರ ತೂಕ 160kg ಯಲ್ಲ, ಬದಲಾಗಿ ಕೇವಲ 30kg ಹಾಗೂ ಇದರ ಮಧ್ಯಭಾಗ ಟೊಳ್ಳಾಗಿದೆ. ಇದನ್ನು ಒಂದು ಗೋಣಿಚೀಲದಲ್ಲಿ ಹಾಕಿ ಎಸೆಯಲಾಗಿತ್ತು.

ಈ ಮೂರ್ತಿಯ ಹತ್ತಿರ ಯಾವುದೇ ಹಾವುಗಳಿರಲಿಲ್ಲ, ಇದು ಬಂಗಾರದ ಮೂರ್ತಿಯಲ್ಲ, ಆ ಹಾವು ಹಿಡಿದುಕೊಂಡು ನಡೆಯುವ ವಿಡಿಯೋವಿಗೂ ಶಿವನ ಮೂರ್ತಿಗೂ ಯಾವುದೇ ಸಂಬಂಧವಿಲ್ಲ. ಎಲ್ಲಿಯೂ ಶಿವನ ದೇವಸ್ಥಾನ ಕಟ್ಟುವುದೆಂದು ತೀರ್ಮಾನಿಸಲೂ ಇಲ್ಲ.

ನೋಡ್ರಪ್ಪಾ, ಸುಮ್ಸುಮ್ನೆ ವಾಟ್ಸಪ್ಪಿನಲ್ಲಿ ಏನೋ ಬಂತು ಅಂತ, ಅಥವಾ ಸ್ನೇಹಿತರು ಫೇಸ್ಬುಕ್ ನಲ್ಲಿ ಏನೇನೋ ಶೇರ್ ಮಾಡಿದರು ಅಂತ ಹಿಂದು-ಮುಂದು ನೋಡದೆ ಸೀದಾ ಶೇರ್ ಮಾಡುವುದಲ್ಲ. ಸ್ವಲ್ಪ ಯೋಚಿಸಿ, ಸ್ವಲ್ಪ ಸ್ಮಾರ್ಟ್ ಆಗಿ. ಸುಳ್ಳುಗಳ ಸಂತೆಯಲ್ಲಿ ನೀವು ಬದುಕಬೇಡಿ, ಸತ್ಯ ಏನೆಂಬುದನ್ನು ನೀವು ಅರಿತುಕೊಳ್ಳಿ. ಓಕೆ. ಈಗ ಈ ಲೇಖನವನ್ನು ಶೇರ್ ಮಾಡಿ ಹಾಗೂ ಜನರಲ್ಲಿ ಅರಿವು ಮೂಡಿಸಿ. ಇಂಗ್ಲಿಷ್ ಭಾಷೆಯಲ್ಲಿ ಬರೆದ ವಿವರವಾದ ಲೇಖನವನ್ನು ಓದಲು ಈ ಲಿಂಕನ್ನು ಕ್ಲಿಕ್ ಮಾಡಿ.

What do you think?

0 points
Upvote Downvote

Total votes: 0

Upvotes: 0

Upvotes percentage: 0.000000%

Downvotes: 0

Downvotes percentage: 0.000000%

Comments

Leave a Reply

Your email address will not be published. Required fields are marked *

Loading…

Loading…

ಬಿಹಾರದ ಮುಖ್ಯಮಂತ್ರಿ JDUನ ನಿತೀಶ್ ಕುಮಾರ್ 2015 ರಲ್ಲಿ ನರೇಂದ್ರ ಮೋದಿಯವರ ಬಗ್ಗೆ ಬರೆದ ಒಂದು ಲೇಖನ

ಜವಾಹರ್ ಲಾಲ್ ನೆಹರೂ, ಅಂಬೇಡ್ಕರ್, ಮಹಾತ್ಮಾ ಗಾಂಧಿಯವರ ಸೀಕ್ರೆಟ್ ಫೋಟೋಗಳು ಹಾಗೂ ಆ ಫೋಟೋಗಳ ರಹಸ್ಯ