in

ಬಿಹಾರದ ಮುಖ್ಯಮಂತ್ರಿ JDUನ ನಿತೀಶ್ ಕುಮಾರ್ 2015 ರಲ್ಲಿ ನರೇಂದ್ರ ಮೋದಿಯವರ ಬಗ್ಗೆ ಬರೆದ ಒಂದು ಲೇಖನ

ಅಕ್ಟೋಬರ್ 27, 2015ರಲ್ಲಿ ಫೇಸ್ಬುಕ್ ನೋಟ್ ಮುಖಾಂತರ ಬರೆದ “ಬಣ್ಣ ಬದಲಿಸುವ ಮೋದಿ” ಎಂಬ ಲೇಖನ 1000 ಬಾರಿ ಶೇರ್ ಆಗಿದೆ, 1000 ಕಾಮೆಂಟ್ಸ್ ಹಾಗೂ 5,600 ಪಡೆದುಕೊಂಡಿದೆ.

ಸಾಮಾಜಿಕ ಜಾಲತಾಣಗಳಲ್ಲಿ ನೀವು ಪೋಸ್ಟ್ ಮಾಡುವ ಅಥವಾ ಅಂತರ್ಜಾಲದಲ್ಲಿ ಅಪ್ಲೋಡ್ ಆಗುವ ಲೇಖನಗಳು, ಫೋಟೋಗಳು ಹಾಗೂ ವಿಡಿಯೋಗಳು ಅಷ್ಟು ಸುಲಭವಾಗಿ ಮರೆಯಾಗುವುದಿಲ್ಲ. ಇಂತಹ ಪೋಸ್ಟ್ಗಳು ಹಲವಾರು ಬಾರಿ ಹಲವಾರು ಜನರನ್ನು, ಅದರಲ್ಲೂ ಮುಖ್ಯವಾಗಿ ರಾಜಕಾರಣಿಗಳನ್ನು ಕಾಡಿದ್ದುಂಟು.

ಅವರ ಲೇಖನದ ಲಿಂಕ್ ಇಲ್ಲಿದೆ ನೋಡಿ. ಅದರ ಆರ್ಕೈವ್ ವರ್ಷನ್ ಅನ್ನು ಇಲ್ಲಿ ಸೇವ್ ಮಾಡಿದ್ದೇನೆ (ಒಂದು ವೇಳೆ ಈ ಲೇಖನ ಡಿಲೀಟ್ ಆದಲ್ಲಿ). ಇಲ್ಲಿ ನಾನು ಅವರ ಹಿಂದಿ ಭಾಷೆಯ ಲೇಖನವನ್ನು ಕನ್ನಡಕ್ಕೆ ಅನುವಾದಿಸಿ ನಿಮ್ಮ ಮುಂದೆ ಇಡಲು ಸಾಧ್ಯವಾದಷ್ಟು ಪ್ರಯತ್ನ ಪಡುತ್ತೇನೆ. ತಪ್ಪಿದ್ದಲ್ಲಿ ಕ್ಷಮಿಸಿ.

ಲೇಖನದ ಶೀರ್ಷಿಕೆ: ಬಣ್ಣ ಬದಲಾಯಿಸುವ ಮೋದಿ

ದೇಶದ ಪ್ರಧಾನಮಂತ್ರಿಯಾಗಿ ನೇತೃತ್ವ ಇಷ್ಟೊಂದು ಟೊಳ್ಳು ಹಾಗೂ ವಿಚಾರ ಇಷ್ಟೊಂದು ತುಚ್ಛವಾಗಲೂಬಹುದು ಎನ್ನುವುದನ್ನು ನೋಡಿ ನನಗೆ ಆಶ್ಚರ್ಯವಾಗುತ್ತಿದೆ ಹಾಗೇ ದುಃಖವೂ. ಈ ಮಹಾನ್ ದೇಶ ಎಷ್ಟೊಂದು ಒಳ್ಳೆಯ ನಾಯಕರನ್ನು ನಮಗೆ ನೀಡಿವೆ ಎಂದರೆ ನಾವು ನಮ್ಮ ಮಕ್ಕಳಿಗೆ ಅವರ ಉದಾರತೆಯ ಉದಾಹರಣೆಯನ್ನು ಕೊಡುತ್ತೇವೆ ಹಾಗೂ ಬಹಳ ಗರ್ವದಿಂದ ಅನೇಕತೆಯಲ್ಲಿ ಏಕತೆಯ ಪಾಠವನ್ನು ಬೋಧಿಸುತ್ತೇವೆ. ಇಲ್ಲಿಯವರೆಗೆ ಈ ದೇಶದಲ್ಲಿ ಯಾವುದೇ ಪ್ರಧಾನಮಂತ್ರಿ ತನ್ನ ಜಾತಿ ಅಥವಾ ಧರ್ಮವನ್ನು ತನ್ನ ಪರಿಚಯ ಮಾಡಿಕೊಂಡಿರಲಿಲ್ಲ. ಆದ್ದರಿಂದಲೇ ಈಗಿನ ಪ್ರಧಾನಮಂತ್ರಿಗಳು (ನರೇಂದ್ರ ಮೋದಿ) ಸಾರ್ವಜನಿಕವಾಗಿ ತನ್ನ ಜಾತಿ ಹಾಗೂ ಧರ್ಮದ ಆಧಾರದಲ್ಲಿ ವೋಟ್ ಕೇಳುವುದನ್ನು ನೋಡಿ ನನ್ನ ಹೃದಯ ಅಲುಗಾಡಿ ಹೋಯಿತು. ಒಂದು ಬಹಳ ಪವಿತ್ರ ಹಾಗೂ ಗೌರವಯುತ ಪರಂಪರೆಯನ್ನು ಘಾಸಿಗೊಳಿಸಲಾಗುವ ಹಾಗೇ ಭಾವಿಸುತ್ತಿದೆ. ನಾನು ಇದನ್ನು ಬಲವಾಗಿ ವಿರೋಧಿಸುತ್ತೇನೆ.

ಇದು ಇಂತಹ ನಾಯಕತ್ವ? ಒಮ್ಮೆ ಪ್ರಧಾನಮಂತ್ರಿ ತಾನು ಹಿಂದೂ ಎಂದು ಹೇಳುತ್ತಾನೆ ಇನ್ನೊಮ್ಮೆ ನಾನು ದಲಿತ ಹಾಗೂ ಹಿಂದುಳಿದ ವರ್ಗದಿಂದ ಎಂದು ಹೇಳುತ್ತಾನೆ, ಮತ್ತೊಮ್ಮೆ ನಾನೊಬ್ಬ ಗುಜರಾತಿ ವ್ಯಾಪಾರಿ ಎಂದು ಗರ್ವ ಪಡುತ್ತಾನೆ. ಲಕ್ಷಾಂತರ ರುಪಾಯಿಯ ಸೋತು ಧರಿಸುತ್ತಾನೆ, ಬಂಡವಾಳಶಾಹಿಗಳೊಂದಿಗೆ ನಂಟನ್ನು ಇಟ್ಟುಕೊಳ್ಳುತ್ತಾನೆ, ಆದರೆ ಮತ ಕೇಳುವ ಸಂದರ್ಭದಲ್ಲಿ ತಾನೊಬ್ಬ ಬಡ ಚಾ ಮಾರುವವ ಎಂದು ಪ್ರಚಾರ ಮಾಡುತ್ತಾನೆ. ಜನರ ಕಣ್ಣಿಗೆ ಧೂಳೆಸೆದು ಬೇರೆ ನಾಯಕರ ಅಥವಾ ವಿರೋಧಿಸುವ ನಾಯಕರನ್ನು ಕೊಕ್ಕುವಂತೆ ಮಾತನ್ನಾಡುತ್ತಾನೆ. ಹಾಗಾದರೆ ಇದೊಂದು ಯಾವ ತರಹದ ನಾಯಕತ್ವ? ಒಬ್ಬ ವ್ಯಕ್ತಿ ತನ್ನ ಜಾತಿ, ಸಂಪ್ರದಾಯ, ಕ್ಷೇತ್ರ ಹಾಗೂ ಭಾಷೆಯ ಆಧಾರದಲ್ಲಿ ನಾಯಕನಾಗಿ ಬಿಂಬಿಸಲು ಹೊರಟರೆ, ಅವನು ದೇಶವನ್ನು ಹೇಗೆ ಚಲಾಯಿಸುತ್ತಾನೆ?

ಒಮ್ಮೆ ಅಟಲ್ ಜೀ ಯವರು ಬಿಹಾರಕ್ಕೆ ಬಂದಾಗ ಒಂದು ಸಭೆಯಲ್ಲಿ ಹೇಳಿದ್ದರು – “ನೀವು ಬಿಹಾರಿಯಾದರೆ ನಾನು ಅಟಲ್ ಬಿಹಾರಿ” ಎಂದು. ಹೀಗೆ ದೇಶ ಕಂಡ ಅನೇಕ ಮಹಾನ್ ನಾಯಕರು ತಮ್ಮ ಉದಾರತೆಯ ವ್ಯಕ್ತಿತ್ವದಿಂದ ವಿವಿಧತೆ ತುಂಬಿದ ನಮ್ಮ ದೇಶದ ಪ್ರತಿಯೊಂದು ವ್ಯಕ್ತಿ, ವರ್ಗ, ಜಾತಿ, ಸಮುದಾಯ, ಸಂಪ್ರದಾಯ, ಕ್ಷೇತ್ರ ಹಾಗೂ ಭಾಷೆಯನ್ನು ಮುಟ್ಟಿ ಅದನ್ನು ಸರಿಯಾಗಿ ತೂಗಿದ್ದಾರೆ. ತಮ್ಮ ಸಂಕುಚಿತ ಮನೋಭಾವದಿಂದ ನನ್ನ ದೇಶದ ಮಹಾನ್ ಪರಂಪರೆಯನ್ನು ಕಲುಷಿತಗೊಳಿಸಬಾರದೆಂದು ನಾನು ಪ್ರಧಾನ ಮಂತ್ರಿಯವರಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ. ಪ್ರಜಾಪ್ರಭುತ್ವದಲ್ಲಿ ಸೋಲು ಗೆಲುವು ಸಾಮಾನ್ಯ. ನೀವು ಬಿಹಾರದಲ್ಲಿ ಸೋಲುತ್ತಿದ್ದೀರ ಅಂದ್ರೆ ಏನಾಯಿತು? ನಿಮ್ಮ ದುರಾಲೋಚನೆಗಳಿಂದ ದೇಶವಾಸಿಗಳ ನಂಬಿಕೆಯನ್ನು ಕಳೆದುಕೊಳ್ಳಬೇಡಿ.

ಇಲ್ಲಿ ಮೇಲೆ ಪ್ರಕಟಿಸಿದ ಬರಹಗಳು ಬಿಹಾರದ ಮುಖ್ಯಮಂತ್ರಿ JDUನ ನಿತೀಶ್ ಕುಮಾರ್ ರವರು ಬರೆದ ಲೇಖನದ ಅನುವಾದವಾಗಿದೆ. ಪ್ರಧಾನಮಂತ್ರಿಯನ್ನು ಏಕವಚನದಲ್ಲಿ ಸಂಬೋಧಿಸಿದ್ದು ಅವರೇ, ಅಲ್ಲದೆ ನಾನಲ್ಲ.

ಇತ್ತೀಚಿನ ಬೆಳವಣಿಗೆಯಲ್ಲಿ, ಕಾಂಗ್ರೆಸ್ ಹಾಗೂ ಲಾಲೂ ಪ್ರಸಾದ್ ಯಾದವ್ ರವರ RJDಯೊಂದಿಗೆ ಬಿಹಾರದಲ್ಲಿ ಮಹಾಮೈತ್ರಿ ಮಾಡಿಕೊಂಡು ಮುಖ್ಯಮಂತ್ರಿಯಾಗಿದ್ದ ನಿತೀಶ್ ಕುಮಾರ್ ರವರು ರಾಜೀನಾಮೆ ನೀಡಿ, ಬಿಜೆಪಿಯೊಂದಿಗೆ ಕೈ ಮೈತ್ರಿ ಮಾಡಿ ಮರುದಿನವೇ ಪುನಹ ಮುಖ್ಯಮಂತ್ರಿ ಪದವಿ ಸ್ವೀಕರಿಸಿದ್ದಾರೆ. ರಾಜಕಾರಣಿಗಳು ಎಷ್ಟು ಬೇಗ ತಮ್ಮ ಬಣ್ಣ ಬದಲಾಯಿಸುತ್ತಾರಲ್ಲವೇ? ಸ್ವತಃ ಬಣ್ಣ ಬದಲಾಯಿಸುವ ಗುಣ ಹೊಂದಿರುವ ರಾಜಕಾರಣಿಯೊಬ್ಬ ಇನ್ನೊಬ್ಬನ ಬಣ್ಣ ಬದಲಾಯಿಸುವ ಗುಣವನ್ನು ಠೀಕಿಸುವುದೊಂದು ವಿಪರ್ಯಾಸ.

What do you think?

0 points
Upvote Downvote

Total votes: 0

Upvotes: 0

Upvotes percentage: 0.000000%

Downvotes: 0

Downvotes percentage: 0.000000%

Comments

Leave a Reply

Your email address will not be published. Required fields are marked *

Loading…

Loading…

ಭಾರತಕ್ಕೆ ಹೆದರಿ ಚೀನಾದ ವಿದೇಶ ಮಂತ್ರಿ ರಾಜೀನಾಮೆ – ವೈರಲ್ ಸುದ್ದಿ

160 ಕೆಜಿಯ ಶಿವನ ಬಂಗಾರದ ಮೂರ್ತಿ, ಸಾವಿರಾರು ಹಾವುಗಳು, ಶೀಘ್ರವೇ ದೇವಾಲಯ – ವೈರಲ್ ಸುದ್ದಿಯ ಸತ್ಯ ಏನು?