in ,

ಭಾರತಕ್ಕೆ ಹೆದರಿ ಚೀನಾದ ವಿದೇಶ ಮಂತ್ರಿ ರಾಜೀನಾಮೆ – ವೈರಲ್ ಸುದ್ದಿ

ಹಿಂದಿ ಭಾಷೆಯ ಶೀರ್ಷಿಕೆಯಿದ್ದ ಒಂದು ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರ ಕನ್ನಡ ಅನುವಾದದ ಪೋಸ್ಟ್ಗಳು ವಾಟ್ಸಪ್ಪಿನಲ್ಲಿ ಹರಿದಾಡಿರಬಹುದು.

ಒಂದು ಸರಕಾರವನ್ನು ಹಾಗೂ ಅದರ ಪ್ರಧಾನ ಮಂತ್ರಿಯನ್ನು ಹೊಗಳಲು ಒಂದು ನಿರ್ದಿಷ್ಟ ಪಕ್ಷದ ಅಥವಾ ಒಂದು ನಿರ್ದಿಷ್ಟ ವ್ಯಕ್ತಿಯ ಅಭಿಮಾನಿಗಳು ಸಾಕಷ್ಟು ಸುಳ್ಳು ಸುದ್ದಿಗಳನ್ನು ಹಾಗೂ ಉತ್ಪ್ರೇಕ್ಷಿತ ಪೋಸ್ಟ್ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ತೇಲಿ ಬಿಡುತ್ತಿದ್ದಾರೆ. ಇದೆ ರೀತಿ, ಇತ್ತೀಚಿಗೆ ಒಂದು ಎಡಿಟ್ ಮಾಡಿದ ಫೋಟೋದಲ್ಲಿ ನರೇಂದ್ರ ಮೋದಿ ಹಾಗೂ ಚೀನಾದ ವಿದೇಶ ಮಂತ್ರಿಯ ಫೋಟೋವನ್ನು ಹಾಕಿ ಉದ್ದನೆಯ ಶೀರ್ಷಿಕೆಯನ್ನು ಗೀಚಲಾಗಿತ್ತು.

ಶೀರ್ಷಿಕೆಯಲ್ಲಿ ಭಾರತಕ್ಕೆ ಹೆದರಿ ಹಾಗೂ ಒತ್ತಡದಿಂದ ಚೀನಾದ ವಿದೇಶಾಂಗ ಮಂತ್ರಿ ರಾಜೀನಾಮೆ ಎಂದು ಬರೆಯಲಾಗಿ ಫೇಸ್ಬುಕ್ ಹಾಗೂ ವಾಟ್ಸಪ್ಪಿನಲ್ಲಿ ಹರಿಯಬಿಡಲಾಗಿತ್ತು.

“ನನ್ನ ಮೇಲೆ ತುಂಬಾ ಒತ್ತಡ ಇದೆ. ಭಾರತದ ವಿರುದ್ಧ ಯುದ್ಧ ಮಾಡಲು ಸಾಧ್ಯವಿಲ್ಲ. ಪ್ರಪಂಚದ ಯಾವ ದೇಶಗಳೂ ನಮ್ಮೊಂದಿಗಿಲ್ಲ, ಎಲ್ಲಾ ಭಾರತದೊಂದಿಗೆ ಇದ್ದಾರೆ. ಒಂದು ವೇಳೆ ನಾವು ಭಾರತದ ಮೇಲೆ ದಾಳಿ ಮಾಡಿದ್ದೇ ಆದಲ್ಲಿ ಲಕ್ಷಾಂತರ ಚೀನೀ ಸೈನಿಕರು ಬಲಿಯಾಗಬಹುದು. ಎಲ್ಲಾ ಭಾರತೀಯರು ಇದನ್ನು ಬಹಳ ಗರ್ವದಿಂದ ಲೈಕ್ ಹಾಗೂ ಶೇರ್ ಮಾಡಿ” ಎಂದು ಬರೆಯಲಾಗಿತ್ತು.

ಅಸಲೀಯತ್ತಿಗೆ ಚೀನಾದ ವಿದೇಶ ಮಂತ್ರಿ ವಾಂಗ್ ಯೀ ಗ್ರೆಗ್ ಅವರು ಈಗಲೂ ಅವರ ಪದವಿಯಲ್ಲೇ ಮುಂದುವರಿಯುತ್ತಿದ್ದಾರೆ ಹಾಗೂ ಎಲ್ಲೂ ಅವರು ರಾಜೀನಾಮೆ ಕೊಟ್ಟ ರಿಪೋರ್ಟ್ ಕಾಣಲು ಸಿಗುತ್ತಿಲ್ಲ. ಇದು ಒಂದು ಸುಳ್ಳು ಸುದ್ದಿಯಾಗಿದೆ.

ಇದಕ್ಕೆ ಬದಲಾಗಿ, ಚೀನಾದ ವಿದೇಶ ಮಂತ್ರಿ ಭಾರತಕ್ಕೆ ಎಚ್ಚರ ಕೊಟ್ಟ ಸುದ್ದಿಗಳು ಬಹಳಷ್ಟು ಇವೆ. ಸಾಧಾರಣ ಎಲ್ಲಾ ಸುದ್ದಿ ಮಾಧ್ಯಮಗಳು ಹಾಗೂ ನ್ಯೂಸ್ ಚನ್ನೆಲ್ಗಳು ಸುದ್ದಿ ಪ್ರಸಾರ ಮಾಡಿವೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ BRICS NSA’s ಸಭೆಯಲ್ಲಿ ಭಾಗವಹಿಸಲು ಹೋರಾಟ ಮರುದಿನವೇ ಚೀನಾದ ವಾಂಗ್ ಯೀ ಗ್ರೆಗ್ ಅವರು “ಭಾರತವು ತನ್ನ ಆತ್ಮಸಾಕ್ಷಿಯಿಂದ ಸೈನ್ಯವನ್ನು ದೋಕ್ಲಮ್ ನಿಂದ ಹಿಂಪಡೆಯಲಿ” ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

What do you think?

0 points
Upvote Downvote

Total votes: 0

Upvotes: 0

Upvotes percentage: 0.000000%

Downvotes: 0

Downvotes percentage: 0.000000%

Comments

Leave a Reply

Your email address will not be published. Required fields are marked *

Loading…

Loading…

ಕೇರಳದ ಶಾಸಕನ ಹಸಿರು ಕಾರಿನಲ್ಲಿ ಪಾಕಿಸ್ತಾನದ ಧ್ವಜ – ವೈರಲ್ ಸ್ಟೋರಿಯ ಸತ್ಯಾಸತ್ಯತೆ

ಬಿಹಾರದ ಮುಖ್ಯಮಂತ್ರಿ JDUನ ನಿತೀಶ್ ಕುಮಾರ್ 2015 ರಲ್ಲಿ ನರೇಂದ್ರ ಮೋದಿಯವರ ಬಗ್ಗೆ ಬರೆದ ಒಂದು ಲೇಖನ