in

ಕೇರಳದ ಶಾಸಕನ ಹಸಿರು ಕಾರಿನಲ್ಲಿ ಪಾಕಿಸ್ತಾನದ ಧ್ವಜ – ವೈರಲ್ ಸ್ಟೋರಿಯ ಸತ್ಯಾಸತ್ಯತೆ

2016 ರಲ್ಲಿ ಶುರುವಾದ ಈ ಸುದ್ದಿಯು ಹಿಂದಿ, ಇಂಗ್ಲಿಷ್, ಕನ್ನಡ ಹಾಗೂ ಇನ್ನೂ ಹಲವಾರು ಭಾಷೆಗಳಲ್ಲಿ ಶೀರ್ಷಿಕೆಯೊಂದಿಗೆ ಇಂದಿಗೂ ಸಾಮಾಜಿಕ ಜಾಲತಾಣ ಹಾಗೂ ಮೆಸೇಜ್ ಆಪ್ ವಾಟ್ಸಪ್ಪ್ ನಲ್ಲಿ ಶೇರ್ ಆಗುತ್ತಲೇ ಇದೆ.

ಸಾಮಾಜಿಕ ಜಾಲತಾಣ ಎಂದರೆ ಹೀಗೇನೆ ಸುಳ್ಳುಗಳ ಸಂತೆಯಾಗಿ ಮಾರ್ಪಾಡಾಗುತ್ತಿದೆ. ಯಾರು ಏನನ್ನು ಬೇಕಾದರೂ ಸತ್ಯವೆಂದು ಬಿಂಬಿಸಿ ಜನರ ಭಾವನೆಗಳಿಗನುಸಾರ ಶೇರ್ ಮಾಡಿ ವೈರಲ್ ಮಾಡಬಹುದು. ಆದರೆ, ಜನರ ಬುದ್ಧಿವಂತಿಕೆ ಹೆಚ್ಚಾದಂತೆ ಇದನ್ನು ಕಡಿಮೆಗೊಳಿಸಬಹುದು. ಇಲ್ಲೊಂದು ಸ್ಟೋರಿ ನೋಡಿ. ೨೦೧೬ ರ ಸಮಯದಲ್ಲಿ ವೈರಲ್ ಆಗಿದ್ದ ಒಂದು ಹಸಿರು ಬಣ್ಣದ ಕಾರು ಹಾಗೂ ಒಂದು ಹಸಿರು ಧ್ವಜ ಅದರಲ್ಲಿ ಚಂದ್ರ ಹಾಗೂ ನಕ್ಷತ್ರ ಇರುವಂತಹ ಒಂದು ಫೋಟೋ ಇಂದಿಗೂ ಸಮಾಜಿಕ ಮಾಧ್ಯಮಗಳಲ್ಲಿ ಹರಡಲ್ಪಡುತ್ತಿದೆ.

ಈ ಫೋಟೋದಲ್ಲಿರುವ ಕಾರು ಒಬ್ಬ ಕೇರಳದ ಶಾಸಕನದ್ದು ಹಾಗೂ ಆತನು ತನ್ನ ಕಾರಿನಲ್ಲಿ ಪಾಕಿಸ್ತಾನದ ಧ್ವಜವನ್ನು ಹಾರಿಸಿದ್ದಾನೆ. ಇವನನ್ನು ಏನು ಮಾಡಬೇಕು? ಎಂದೆಲ್ಲ ಪ್ರಶ್ನೆಗಳು ಹಾಕುತ್ತಿದ್ದಾರೆ. ಅದಕ್ಕೆ ಉತ್ತರವಾಗಿ ಜನರು ಅವನನ್ನು ಕೊಂಡು ಹಾಕಿ, ಕಾರಿಗೆ ಬೆಂಕಿ ಕೊಡಿ, ಪಾಕಿಸ್ತಾನಕ್ಕೆ ಕಳುಹಿಸಿ, ಅವನ ಅಮ್ಮನ್…. ಅಕ್ಕನ್… ಎಂದೆಲ್ಲ ಬಯ್ಯುತ್ತಿದ್ದಾರೆ. ಆದರೆ ಯಾರಾದರೂ ಅದರ ಬಗ್ಗೆ ಸ್ವಲ್ಪವಾದರೂ ಪರಿಶೀಲಿಸಲು ಹೊರಟರೇ? ಹಾಗೆ ಕಾಣ್ತಾ ಇಲ್ಲ.

ಹಿಂದಿ ಭಾಷಿಕರೂ ಅದನ್ನೇ ಶೇರ್ ಮಾಡುತ್ತಿದ್ದಾರೆ. ಹೀಗೇನೇ ಒಂದು ಸುಳ್ಳು ಸುದ್ದಿಯು ವೈರಲ್ ಆಗುವುದು. ಆದರೆ ಇದರ ಹಿಂದಿನ ಸತ್ಯವೇನು? ಆ ಕಾರು ಒಬ್ಬ ಮುಸ್ಲಿಂ ಲೀಗ್ ಅಭ್ಯರ್ಥಿಯಾಗಿ ಶಾಸಕನಾದವನ ಕಾರು. ಆದರೆ ಆತನು ಕಾರಿನಲ್ಲಿ ಕಟ್ಟಿದ್ದು ಪಾಕಿಸ್ತಾನದ ಧ್ವಜವಲ್ಲ, ಅದು ಮುಸ್ಲಿಂ ಲೀಗ್ ಪಕ್ಷದ ಧ್ವಜ. ನೀವು ಎರಡು ಧ್ವಜಗಳ ನಡುವಿನ ವ್ಯತ್ಯಾಸವನ್ನು ಕೆಳಗೆ ಕಾಣಬಹುದು. ಪಾಕಿಸ್ತಾನದ ಧ್ವಜದಲ್ಲಿ ಒಂದು ಭಾಗದಲ್ಲಿ ಬಿಳಿ ಪಟ್ಟಿ ಇದೆ ಆದರೆ ಮುಸ್ಲಿಂ ಲೀಗ್ ಪಕ್ಷದ ಧ್ವಜದಲ್ಲಿ ಇಲ್ಲ. ಮುಸ್ಲಿಂ ಲೀಗ್ ನ ಧ್ವಜದ ಬಗ್ಗೆ ವಿಕಿಪೀಡಿಯಾದಲ್ಲಿ ನೋಡಬಹುದು.

ಆದ್ದರಿಂದ, ಗೆಳೆಯರೇ, ಸಾಮಾಜಿಕ ಜಾಲತಾಣಗಳಲ್ಲಿ ಬರುವಂತಹ ಯಾವುದೇ ಸುದ್ದಿಗಳನ್ನು ಅಥವಾ ಫೋಟೋಗಳನ್ನು ಶೇರ್ ಮಾಡುವ ಮುಂಚೆ ಒಂದು ಸ್ವಲ್ಪನಾದರೂ ಪರಿಶೀಲಿಸಿ. ಸುಳ್ಳುಗಳ ಸಂತೆಯಲ್ಲಿ ನೀವು ಬದುಕಬೇಡಿ, ಸತ್ಯ ಏನೆಂಬುದನ್ನು ನೀವು ಅರಿತುಕೊಳ್ಳಿ. ಈ ಲೇಖನವನ್ನು ಶೇರ್ ಮಾಡಿ ಹಾಗೂ ಜನರಲ್ಲಿ ಅರಿವು ಮೂಡಿಸಿ.

What do you think?

0 points
Upvote Downvote

Total votes: 0

Upvotes: 0

Upvotes percentage: 0.000000%

Downvotes: 0

Downvotes percentage: 0.000000%

Comments

Leave a Reply

Your email address will not be published. Required fields are marked *

Loading…

Loading…

ರಾಷ್ಟ್ರಪತಿಯ ಟ್ವಿಟ್ಟರ್ ಖಾತೆಯ ಬಗ್ಗೆ ಭಾರತದ ಮಾಧ್ಯಮಗಳಿಂದ ಸುಳ್ಳು ಮಾಹಿತಿ.

ಭಾರತಕ್ಕೆ ಹೆದರಿ ಚೀನಾದ ವಿದೇಶ ಮಂತ್ರಿ ರಾಜೀನಾಮೆ – ವೈರಲ್ ಸುದ್ದಿ