in

ರಾಷ್ಟ್ರಪತಿಯ ಟ್ವಿಟ್ಟರ್ ಖಾತೆಯ ಬಗ್ಗೆ ಭಾರತದ ಮಾಧ್ಯಮಗಳಿಂದ ಸುಳ್ಳು ಮಾಹಿತಿ.

ಭಾರತದ ಹದಿನಾಲ್ಕನೇ ರಾಷ್ಟ್ರಪತಿ ರಾಮನಾಥ್ ಕೊವಿಂದ್ ರವರು ಕೇವಲ ಒಂದು ಗಂಟೆಯಲ್ಲಿ 30 ಲಕ್ಷಕ್ಕೂ ಅಧಿಕ ಟ್ವಿಟ್ಟರ್ (ಸಾಮಾಜಿಕ ಮಾಧ್ಯಮ) ಫಾಲೋವರ್ಸನ್ನು ಪಡೆದುಕೊಂಡಿದ್ದಾರೆ ಎಂದು ಹಲವಾರು ಮಾಧ್ಯಮಗಳು ಸುದ್ದಿ ಪ್ರಕಟಿಸಿತ್ತು.

ಏನೂ ಸಂಶೋಧನೆ ಇಲ್ಲದೆ ಸುದ್ದಿ ಬಿತ್ತರಿಸುವುದರಲ್ಲಿ ಭಾರತೀಯ ಮಾಧ್ಯಮಗಳು ನಾ ಮುಂದು ತಾ ಮುಂದು ಎಂದು ಹೋರಾಡುವಂತೆ ಕಾಣುತ್ತಿದೆ. ಪ್ರತೀ ದಿನ, ಯಾವುದಾದ್ರೊಂದು ಸುದ್ದಿಗಳು ಸುಳ್ಳೆಂದು ಸಾಬೀತಾಗುತ್ತಲೇ ಇದೆ. ಜನರು ಅದನ್ನು ನಂಬುತ್ತಲೇ ಇದ್ದಂತೆ ಕಾಣುತ್ತಿದೆ. ಇಲ್ಲಿ ಇದೆ ನೋಡಿ ಒಂದು ಸಣ್ಣ ಉದಾಹರಣೆ.

ಬಿಜೆಪಿಯಿಂದ ಭಾರತದ ರಾಷ್ಟ್ರಪತಿ ಸ್ಥಾನಕ್ಕೆ ನಾಮಾಂಕಿತರಾಗಿ ಜಯಿಸಿದ ರಾಮನಾಥ್ ಕೊವಿಂದ್ ರವರನ್ನು ಹೊಗಳುವ ಭರದಲ್ಲಿ ಹಾಗೂ ಅವರ ಬಗ್ಗೆ ಜನರಲ್ಲಿ ಹೆಚ್ಚು ಪ್ರೀತಿಯನ್ನು ಅಥವಾ ಉತ್ಪ್ರೇಕ್ಷಿತ ಜನಪ್ರಿಯತೆಯನ್ನು ಉಂಟುಮಾಡಲು ಹಲವಾರು ಬಲಪಂಥೀಯ ಕಡೆ ವಾಲಿದಂತಹ ಮಾಧ್ಯಮಗಳು ಸುಳ್ಳು ಸುದ್ದಿಯನ್ನು ಪ್ರಕಟಿಸಿ ಹಾಗೂ ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿ ಪೇಚಿಗೆ ಸಿಲುಕಿವೆ.

ರಾಷ್ಟ್ರಪತಿ ಕೊವಿಂದ್ ರವರ ಟ್ವಿಟ್ಟರ್ ಖಾತೆಯು ಕೇವಲ ೧ ಘಂಟೆಯೊಳಗೆ ೩೦ ಲಕ್ಷಕ್ಕೂ ಅಧಿಕ ಫಾಲೋವರ್ಸನ್ನು (ಅನುಯಾಯಿಗಳು) ಪಡೆದಿದೆಯೆಂದು ಸುದ್ದಿಯನ್ನು ಪ್ರಕಟಿಸಿತ್ತು. Zee News, Republic TV, Times of India, Economic Times, Financial Express ಹಾಗೂ ಇನ್ನೂ ಹಲವಾರು ಸುದ್ದಿ ಮಾಧ್ಯಮಗಳು ಈ ಸುದ್ದಿಯನ್ನು ಪ್ರಕಟಿಸಿತ್ತು. ಆದರೆ ಇದರ ಹಿಂದಿನ ಸತ್ಯವೇನು?

ನಿಜವಾಗಿ, ಮಾಜಿ ರಾಷ್ಟ್ರಪತಿಯಾದ ಪ್ರಣಬ್ ಮುಖರ್ಜಿಯವರ ಟ್ವಿಟ್ಟರ್ ಖಾತೆಯನ್ನೇ ಹೊಸ ರಾಷ್ಟ್ರಪತಿಯವರಿಗೆ ಹಸ್ತಾಂತರಿಸಲಾಗಿತ್ತು. ಹಿಂದಿನ ರಾಷ್ಟ್ರಪತಿಯವರ ಟ್ವೀಟ್ಸ್ ಗಳನ್ನು ಹೊರತುಪಡಿಸಿ ಅದರ ಯೂಸರ್ ನೇಮ್ ಹಾಗೂ ೩೦ ಲಕ್ಷಕ್ಕೂ ಅಧಿಕ ಫಾಲೋವರ್ಸನ್ನು ಹಾಗೇನೇ ಹಸ್ತಾಂತರಿಸುವುದು ಟ್ವಿಟ್ಟರ್ ಹಾಗೂ ಬೇರೆ ಸಾಮಾಜಿಕ ಜಾಲತಾಣಗಳ ನಿಯಮಗಳೊಲ್ಲೊಂದು. ಒಂದು ರಾಷ್ಟ್ರದ ಸರಕಾರಕ್ಕೆ ಸಂಬಂಧಿಸಿದ ಪ್ರಮುಖ ಖಾತೆಗಳನ್ನು ಹೊಸಬರಿಗೆ ಹೀಗೇನೆ ಹಸ್ತಾಂತರಿಸಲಾಗುತ್ತದೆ.

ಮಾಜಿ ರಾಷ್ಟ್ರಪತಿಯವರ ಹಳೆಯ ಟ್ವಿಟ್ಟರ್ ಪೋಸ್ಟ್ಗಳು ಈಗ @ಪೋಇ೧೩ ಎಂಬ ಖಾತೆಯಲ್ಲಿ ಲಭ್ಯವಿದೆ. ಯಾವುದೇ ವ್ಯಕ್ತಿ ರಾಷ್ಟ್ರಪತಿಯಾದಲ್ಲಿ ಅವರು @ರಾಷ್ಟ್ರಪತಿಭಾವಂ ಅಕೌಂಟನ್ನೇ ಉಪಯೋಗಿಸುತ್ತಿರುತ್ತಾರೆ. ಈಗ ಈ ಅಕೌಂಟನ್ನು ರಾಮನಾಥ್ ಕೊವೀಂದ್ರವರು ಬಳಸುತ್ತಿದ್ದಾರೆ.

ಈ ಸುದ್ದಿಯು ಒಂದು ತಪ್ಪು ಗ್ರಹಿಕೆಯ ಫಲವಾಗಿರಲೂಬಹುದು, ಬೇಕಂತಲೇ ಜನರಲ್ಲಿ ರಾಮನಾಥ್ ಕೊವಿಂದ್ರ ಬಗ್ಗೆ ಒಲವು ಹೆಚ್ಚಿಸಲು ಬಳಸಿದ ತಂತ್ರವಾಗಿರಲೂಬಹುದು. ಯಾಕೆ ಹೀಗೆ ಹೇಳಿದ್ದೇನಂದ್ರೆ, ಈ ಕಾಲದಲ್ಲಿ ಸರಕಾರದ ಕಾವಲುಗಾರನಾಗಿ ಇರಬೇಕಾಗಿದ್ದ ಮುಖ್ಯವಾಹಿನಿಯ ಮಾಧ್ಯಮಗಳು ಸರಕಾರದ ಪರವಾಗಿ ವಾದ ಮಾಡುವಂತೆ ಸುದ್ದಿಗಳನ್ನು, ಅದರಲ್ಲೂ ಹೆಚ್ಚಾಗಿ ಸುಳ್ಳು ಸುದ್ದಿಗಳನ್ನು ಹರಡುತ್ತಿವೆ.

ಆದರೆ ನೀವು ನೋಡಿ, ಹೇಗೆ ನಮ್ಮ ಟಿವಿ ಚಾನೆಲ್ಗಳು ಹಾಗೂ ಅಂತರ್ಜಾಲ ಸುದ್ದಿ ಮಾಧ್ಯಮಗಳು ಆಧಾರ ರಹಿತ ಹಾಗೂ ಸಂಶೋಧನಾ ರಹಿತ ಪತ್ರಿಕೋದ್ಯಮವನ್ನು ನಡೆಸುತ್ತಿವೆ. ಒಬ್ಬ ಜವಾಬ್ದಾರಿಯುತ ನಾಗರಿಕರಾಗಿ ನೀವು ಇಂತಹ ಸುದ್ದಿಗಳನ್ನು ಶೇರ್ ಮಾಡದೆ, ಅದರ ಬಗ್ಗೆ ಸಾಧ್ಯವಾದಷ್ಟು ಅಂತರ್ಜಾಲದಲ್ಲಿ ಮಾಹಿತಿಯನ್ನು ಕಲೆ ಹಾಕಲು ಪ್ರಯತ್ನಿಸಿ. ಸ್ವಲ್ಪ ಸಂಶೋಧನೆ ಮಾಡಿ ಹಾಗೂ ಇತರರಿಗೂ ತಿಳಿಸಿ.

Read the original article in English on Altnews.in

What do you think?

0 points
Upvote Downvote

Total votes: 0

Upvotes: 0

Upvotes percentage: 0.000000%

Downvotes: 0

Downvotes percentage: 0.000000%

Comments

Leave a Reply

Your email address will not be published. Required fields are marked *

Loading…

Loading…

ಸೈನ್ಯಪ್ರೇಮ ಹಾಗೂ ದೇಶಪ್ರೇಮವನ್ನು ಲೈಕ್ ಹಾಗೂ ಹಣಗಳಿಸಲು ಬಳಸಿದ Laughing Colours ಎಂಬ ಫೇಸ್ಬುಕ್ ಪೇಜ್

ಕೇರಳದ ಶಾಸಕನ ಹಸಿರು ಕಾರಿನಲ್ಲಿ ಪಾಕಿಸ್ತಾನದ ಧ್ವಜ – ವೈರಲ್ ಸ್ಟೋರಿಯ ಸತ್ಯಾಸತ್ಯತೆ