in

ಸೈನ್ಯಪ್ರೇಮ ಹಾಗೂ ದೇಶಪ್ರೇಮವನ್ನು ಲೈಕ್ ಹಾಗೂ ಹಣಗಳಿಸಲು ಬಳಸಿದ Laughing Colours ಎಂಬ ಫೇಸ್ಬುಕ್ ಪೇಜ್

ಸುಮಾರು ಮೂರು ಕೋಟಿ ಅನುಯಾಯಿಗಳಿರುವ ಒಂದು ಭಾರತೀಯ ಫೇಸ್ಬುಕ್ ಪೇಜ್ ಆದ Laughing Colours ಶೇರ್ ಮಾಡಿದ ಸುಳ್ಳು ಶೀರ್ಷಿಕೆಯಿದ್ದ ಸೈನಿಕನ ಫೋಟೋವನ್ನು ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಶೇರ್ ಮಾಡಿದ್ದಾರೆ, 5,000 ಮಂದಿ ಕಾಮೆಂಟ್ಸ್ ಮಾಡಿದ್ದಾರೆ ಹಾಗೂ 3 ಲಕ್ಷಕ್ಕೂ ಅಧಿಕ ಮಂದಿ ಲೈಕ್ (ರಿಯಾಕ್ಷನ್) ಮಾಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಜನರ ಭಾವನೆಯನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದಕ್ಕೆ ಇದೊಂದು ಉದಾಹರಣೆ. ಸುಮಾರು ಮೂರು ಕೋಟಿಯಷ್ಟು ಫಾಲೋವರ್ಸ್ ಇರುವ ಫೇಸ್ಬುಕ್ ಪೇಜ್ “laughing Colours” ಅಮೇರಿಕಾದ ಸೈನಿಕನ ಫೋಟೋವನ್ನು ಭಾರತೀಯ ಸೈನಿಕವೆಂದು ಹೇಳಿ ಶೇರ್ ಮಾಡಿದೆ. ಜನರು ಇದನ್ನು ನಿಜವೆಂದು ನಂಬಿ ಶೇರ್, ಲೈಕ್, ಕಾಮೆಂಟ್ಸ್ ಮಾಡುತ್ತಾರೆ. ಪೇಜಿಗೆ ಲೈಕ್ಸ್ ಸಿಗುತ್ತೆ, ಅವರು ಹಣ ಮಾಡುತ್ತಾರೆ.

ಫೇಸ್ಬುಕ್ನಲ್ಲಿ ಸಾವಿರಾರು ಪೇಜುಗಳಿವೆ, ಅವುಗಳ ನಿರ್ವಾಹಕರು (ಅಡ್ಮಿನ್ಸ್) ತಮ್ಮ ತಮ್ಮ ಪೇಜುಗಳನ್ನು ಜಾಹೀರಾತುಗಳ ಮೂಲಕ ಹಣಗಳಿಸಲು ಬಳಸುತ್ತಾರೆ. ಪರ್ವಾಗಿಲ್ಲ ಅನ್ನಬೋಹುದಿತ್ತು, ಆದರೆ ಅವರು ಬಳಸುವ ವಿಧಾನಗಳು ಸರಿಯಲ್ಲ. ಹಲವಾರು ಪೇಜುಗಳು ಸುಳ್ಳು ಸುದ್ದಿಗಳನ್ನು ಹಾಗೂ ನಕಲಿ ಫೋಟೋಗಳನ್ನು ಜನರ ಭಾವನೆಗಳಿಗನುಸಾರವಾಗಿ ತಯಾರಿಸಿ ಹರಡುತ್ತಾರೆ. ಇದರಿಂದ ಅವರಿಗೆ ಹೆಚ್ಚು ಹೆಚ್ಚು ಲೈಕುಗಳು ಹಾಗೂ ಶೇರ್ ಗಳು ಸಿಗುತ್ತವೆ. ಹೀಗೆ ಪೋಸ್ಟ್ ಮಾಡುವ ಮಧ್ಯೆ ಅವರು ತಮ್ಮ “ಜಾಹೀರಾತುಗಳು ತುಂಬಿರುವ” ವೆಬ್ಸೈಟಿನ ಲಿಂಕ್ ಪೋಸ್ಟ್ ಮಾಡುತ್ತಾರೆ.

ಅದಿರಲಿ, ಇವರು ಶೇರ್ ಮಾಡಿದ ಚಿತ್ರದಲ್ಲಿ ಒಬ್ಬ ಸೈನಿಕನ ಪಾದದ ಅಡಿಭಾಗದಲ್ಲಿ ಗಾಯಗಳಿವೆ ಹಾಗೂ ಅವನು ನಗುಮುಖದಲ್ಲಿ ಇರುವ ಫೋಟೋ ಇದೆ. ಶೀರ್ಷಿಕೆಯಲ್ಲಿ “ಈ ಭಾರತೀಯ ಸೈನಿಕನ ಕಾಲುಗಳು ಸಿಯಾಚಿನ್ ಹಿಮದಿಂದಾಗಿ ಗಾಯಗೊಂಡಿವೆ, ಆದರೂ ಅವನ ಮುಖದಲ್ಲಿ ನಗುವಿದೆ. ದೀರ್ಘಾಯುಷಿಯಾಗು ಭಾರತೀಯ ಸೇನೆ. ಜೈ ಹಿಂದ್.” ಎಂದು ಬರೆಯಲಾಗಿದೆ.

ಹೀಗೆ ನಗುಮುಖದಲ್ಲಿ ನೋವನ್ನು ಮರೆಯುವ ಸಾವಿರಾರು ಜವಾನರು ನಮ್ಮ ಸೈನ್ಯದಲ್ಲಿರಬಹುದು, ಬೇರೆ ದೇಶದ ಸೈನ್ಯದಲ್ಲೂ ಇರಬಹುದು ಆದರೆ ಈ ಚಿತ್ರ ಮಾತ್ರ ಒಬ್ಬ ಅಮೆರಿಕಾದ ಸೈನಿಕ ‘ಸೀನ್ ಸಿಂಪ್ಸನ್’ ನದ್ದು. ಈ ಫೋಟೋವನ್ನು ಆತನೇ ಆತನ ಇನ್ಸ್ಟಾಗ್ರಾಮ್ ಅಕೌಂಟಿನಲ್ಲಿ ಸೆಪ್ಟೆಂಬರ್ 2016ರಲ್ಲಿ ಶೇರ್ ಮಾಡಿದ್ದ.

35 years old and will go through hell to beat guys younger than him. How bad do you want it?

A post shared by Sean Simpson (@seann_simpson) on

Laughing Colours ನಂತಹ ಪೇಜುಗಳು ಹೀಗೆ ಜನರ ದೇಶಪ್ರೇಮ ಹಾಗೂ ಭಾವನೆಗಳನ್ನು ಲೈಕ್ ಹಾಗೂ ಶೇರ್ ಆಗಿ ಪರಿವರ್ತಿಸಿ ಹಣ ಮಾಡುತ್ತವೆ. ಈ ಪೇಜು ಇದಕ್ಕೂ ಮೊದಲು ಹಲವಾರು ಸುಳ್ಳು ಸುದ್ದಿಗಳನ್ನು ಹಾಗೂ ನಕಲಿ ಫೋಟೋಗಳನ್ನು ಶೇರ್ ಮಾಡಿದೆ. ಇಂತಹ ಪೇಜುಗಳು ದಿನಾಲೂ ನಗು ಬರಿಸುವಂತಹ ಫೋಟೋಗಳನ್ನು, ಮಿಮ್ಸ್ ಗಳನ್ನೂ ಶೇರ್ ಮಾಡುತ್ತಿರುತ್ತವೆ, ಮಧ್ಯೆ ಮಧ್ಯೆ ಇಂತಹ ಸುಳ್ಳು ಪೋಸ್ಟ್ಗಳು ಹಾಗೂ ಅವರ ವೆಬ್ಸೈಟಿನ ಲಿಂಕುಗಳನ್ನು ಹಾಕುತ್ತಿರುತ್ತವೆ. ಇಂತಹ ಪೇಜಿನ ಅಡ್ಮಿನ್ಗಳು ತಿಂಗಳಿಗೆ ಲಕ್ಷಾಂತರ ರೂಪಾಯಿ ಕಮಾಯಿ ಮಾಡುತ್ತಾರೆ.

ಹತ್ತು ಸಾವಿರಕ್ಕೂ ಹೆಚ್ಚು ಬಾರಿ ಶೇರ್ ಮಾಡಲಾಗಿದೆ.

ನಿಮ್ಮಲ್ಲಿ ಒಂದು ಕಳಕಳಿಯ ವಿನಂತಿ. ಯಾವುದೇ ಮೂಲ (ಸೊರ್ಸ್) ಇಲ್ಲದ ಫೋಟೋಗಳನ್ನು, ವಿಡಿಯೋಗಳನ್ನು ಹಾಗೂ ಲೇಖನಗಳನ್ನು ಇಂದಿಗೂ ನಂಬಬೇಡಿ. ಇಂತಹ ಹಲವಾರು ಸುದ್ದಿಗಳನ್ನು ಓದಲು ನಮ್ಮ ಫೇಸ್ಬುಕ್ ಪೇಜನ್ನು ಲೈಕ್ ಮಾಡಿ ಹಾಗೂ ನಿಮ್ಮ ಫ್ರೆಂಡ್ಸನ್ನು ಇನ್ವಾಯ್ಟ್ ಮಾಡಿ.

What do you think?

0 points
Upvote Downvote

Total votes: 0

Upvotes: 0

Upvotes percentage: 0.000000%

Downvotes: 0

Downvotes percentage: 0.000000%

Comments

Leave a Reply

Your email address will not be published. Required fields are marked *

Loading…

Loading…

ಸುಳ್ಳು ಸುದ್ದಿ ಹಾಗೂ ನಕಲಿ ವಿಡಿಯೋ ಹರಡಿದ ಬಿಜೆಪಿ ಐಟಿ ಸೆಲ್ಲಿನ ಕಾರ್ಯದರ್ಶಿಯ ಬಂಧನ

ರಾಷ್ಟ್ರಪತಿಯ ಟ್ವಿಟ್ಟರ್ ಖಾತೆಯ ಬಗ್ಗೆ ಭಾರತದ ಮಾಧ್ಯಮಗಳಿಂದ ಸುಳ್ಳು ಮಾಹಿತಿ.