in

ಸುಳ್ಳು ಸುದ್ದಿ ಹಾಗೂ ನಕಲಿ ವಿಡಿಯೋ ಹರಡಿದ ಬಿಜೆಪಿ ಐಟಿ ಸೆಲ್ಲಿನ ಕಾರ್ಯದರ್ಶಿಯ ಬಂಧನ

ಇತ್ತೀಚಿಗೆ ನಡೆದ ಪಶ್ಚಿಮ ಬಂಗಾಳ ಅಶಾಂತಿ ಸಂದರ್ಭದಲ್ಲಿ ಅಲ್ಲಿನ ಅಸನ್ಸೋಲ್ ಎಂಬ ನಗರದ ಬಿಜೆಪಿ ಐಟಿ ಸೆಲ್ಲಿನ ಕಾರ್ಯದರ್ಶಿಯಾದ ತರುಣ್ ಸೇನ್ಗುಪ್ತಾನನ್ನು ಪೊಲೀಸರು ಬಂಧಿಸಿದ್ದಾರೆ.

ಬಿಜೆಪಿಯೇತರ ಸರಕಾರಗಳಿರುವ ರಾಜ್ಯಗಳಾದ ಕೇರಳ, ಕರ್ನಾಟಕ ಹಾಗೂ ಪಶ್ಚಿಮ ಬಂಗಾಳದಲ್ಲಿ ಸುಳ್ಳು ಸುದ್ದಿಗಳು, ವಿಡಿಯೋಗಳು, ಸಂಪಾದಿತ ಫೋಟೋಗಳ ಮೂಲಕ ಅಶಾಂತಿ ಶ್ರಷ್ಟಿಸುವುದು ಇತ್ತೀಚಿಗೆ ಹೆಚ್ಚಾಗಿ ಕಂಡುಬರುತ್ತಿದೆ. ಇದರ ಹಿಂದೆ ಒಂದು ವ್ಯವಸ್ಥಿತವಾದ ಮಾಹಿತಿ ತಂತ್ರಜ್ಞಾನದ ವಿಭಾಗ ಕಾರ್ಯ ನಿರ್ವಹಿಸುವಂತೆ ಭಾಸವಾಗುತ್ತಿದೆ. ಆದರೆ ಸದ್ಯಕ್ಕೆ ಒಂದು ಸಿಹಿ ಸುದ್ದಿ – ಹೀಗೆ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದ ಬಿಜೆಪಿಯ ಪಶ್ಚಿಮ ಬಂಗಾಳದ ಅಸಾನ್ಸೋಲಿನ ಐಟಿ ಸೆಲ್ಲಿನ ಕಾರ್ಯದರ್ಶಿ ತರುಣ್ ಸೇನ್ಗುಪ್ತಾರನ್ನು ಕಳೆದ ವಾರ ಬಂಧಿಸಲಾಗಿದೆ.

ತರುಣ್ ಸೇನ್ಗುಪ್ತಾ ಸೇರಿದಂತೆ ಇನ್ನೂ ಹಲವಾರು ಜನರು ಸಾಮಾಜಿಕ ಜಾಲತಾಣಗಳಲ್ಲಿ ಒಂದು ಹಳೆಯದಾದ ವಿಡಿಯೋವನ್ನು ಶೇರ್ ಮಾಡಿ ಅದರ ಶೀರ್ಷಿಕೆಯಲ್ಲಿ “ಹನುಮಾನ್ ಜಯಂತಿ ದಿವಸ ಒಬ್ಬ ಹನುಮಾನ್ ಭಕ್ತನನ್ನು ಹೊಡೆಯುತ್ತಿರುವ ಮುಸ್ಲಿಂ ಪೊಲೀಸರು” ಎಂದು ಹಾಕಿ ಒಂದು ವಿವರವಾದ ಸುಳ್ಳು ಲೇಖನವನ್ನು ಹರಡಲಾಗಿತ್ತು.

ಇದೆ ವಿಡಿಯೋವನ್ನು ಬಳಸಿ, ಇದೆ ಶೀರ್ಷಿಕೆ ಬಳಸಿ postcard.news ಎಂಬ ವೆಬ್ಸೈಟ್ ಒಂದು ಸುಳ್ಳು ಮಾಹಿತಿಗಳಿಂದ ತುಂಬಿದ ಲೇಖನವನ್ನು ಪ್ರಕಟಿಸಿತ್ತು. ಬಂಧನದ ಸುದ್ದಿ ತಿಳಿದ ತಕ್ಷಣ ಈ ಲೇಖನವನ್ನು ವೆಬ್ಸೈಟಿನಿಂದ ಅಳಿಸಿ ಹಾಕಲಾಗಿದೆ. ಈ ವೆಬ್ಸೈಟ್ ಇದಕ್ಕಿಂತ ಮುಂಚೆ ಹಲವಾರು ಸುಳ್ಳು ಸುದ್ದಿಗಳನ್ನು ಪ್ರಕಟಿಸಿದೆ ಹಾಗೂ ಅದರ ಸಾಮಾಜಿಕ ಜಾಲತಾಣಗಳಲ್ಲಿನ ಲಕ್ಷಾಂತರ ಫಾಲೋವರ್ಸ್ ಗೆ ಶೇರ್ ಮಾಡಿದೆ.

ಇದೆ ರೀತಿ ಪಶ್ಚಿಮ ಬಂಗಾಳದ ಇನ್ನೊಬ್ಬರನ್ನು ಸುಳ್ಳು ಸುದ್ದಿ ತಯಾರಿಸಿ ಶೇರ್ ಮಾಡಿದಕ್ಕಾಗಿ ಪೊಲೀಸರು ಬಂಧಿಸಿದ್ದಾರೆ. ಇವನು ಒಂದು ಭೋಜಪುರಿ ಚಲನಚಿತ್ರದ ದ್ರಶ್ಯದ ಫೋಟೋವನ್ನು ಬಂಗಾಳದಲ್ಲಿನ ಒಂದು ಹಿಂದೂ ಯುವತಿಯ ಮೇಲೆ ಮುಸ್ಲಿಮರ ದೌರ್ಜನ್ಯ ಎಂದು ಶೀರ್ಷಿಕೆ ಹಾಕಿ ಶೇರ್ ಮಾಡಿದ್ದನು. ಈ ಫೋಟೋ ಹಾಗೂ ಸುಳ್ಳು ಮಾಹಿತಿಯನ್ನು ಹಲವಾರು ಮಂದಿ ಬಿಜೆಪಿಯ ನಾಯಕರು ಹಾಗೂ ಅನುಯಾಯಿಗಳು ಶೇರ್ ಮಾಡಿದ್ದರು. (ನಮ್ಮ ವಿವರವಾದ English ಲೇಖನ ಓದಲು ಇಲ್ಲಿ ಕ್ಲಿಕ್ ಮಾಡಿ)

ಭೋಜಪುರಿ ಚಿತ್ರದ ಈ ದ್ರಶ್ಯವನ್ನು ಪಶ್ಚಿಮ ಬಂಗಾಳದಲ್ಲಿ ಹಿಂದೂ ಮಹಿಳೆಯ ಮೇಲೆ ಮುಸ್ಲಿಮರ ದೌರ್ಜನ್ಯವೆಂದು ಬಿಂಬಿಸಲಾಗಿತ್ತು.

ಇದೆ ರೀತಿ ಸುಳ್ಳು ಮಾಹಿತಿ ಹಾಗೂ ಹಳೆಯದಾದ ಗುಜರಾತ್ ಕೋಮು ಸಂಘರ್ಷದ ಸಮಯದಲ್ಲಿ ತೆಗೆದ ಫೋಟೋವನ್ನು ಪಶ್ಚಿಮ ಬಂಗಾಳದ ಕೋಮು ಸಂಘರ್ಷದ ಫೋಟೋ ಎಂದು ಶೇರ್ ಮಾಡಿದ ಆರೋಪದಲ್ಲಿ ದೆಹಲಿಯ ಬಿಜೆಪಿಯ ವಕ್ತಾರರಾದ ನೂಪುರ್ ಶರ್ಮ ಎಂಬವರ ಮೇಲೆ ಎರಡು ಜಾಮೀನು ರಹಿತ ಪ್ರಕರಣ ದಾಖಲಿಸಲಾಗಿದೆ.

2002 ರ ಗುಜರಾತಿನ ಕೋಮು ಸಂಘರ್ಷದ ಸಂಧರ್ಭ ತೆಗೆದ ಈ ಚಿತ್ರವನ್ನು ಪಶ್ಚಿಮ ಬಂಗಾಳದ್ದೆಂದು ಶೇರ್ ಮಾಡಲಾಗಿತ್ತು.

ಸಾಮಾನ್ಯ ಜನರಲ್ಲಿ ನನ್ನ ಒಂದು ಕಳಕಳಿಯ ವಿನಂತಿ. ನಾಯಕರು ಏನೇ ಮಾಡಲಿ ಅವರ ಹಿಂದುಗಡೆ ಅವರನ್ನು ಸಂರಕ್ಷಿಸುವ ಶಕ್ತಿಯುತ ಕೈಗಳು ಇರುತ್ತೆ ಆದರೆ ಅಂತಹದ್ದೇ ಕೆಲಸಗಳನ್ನು ನಮ್ಮ ನಿಮ್ಮಂತವರು ಮಾಡಿದರೆ ಜೀವನವೇ ಹಾಳಾಗಬಹುದು. ಆದ್ದರಿಂದ ಸಾಮಾಜಿಕ ಜಾಲತಾಣ ಹಾಗೂ ವಾಟ್ಸಪ್ಪ್ ಗಳಲ್ಲಿ ಬರುವಂತಹ ಸುದ್ದಿಗಳನ್ನು ಸತ್ಯವೆಂದು ಅಷ್ಟು ಸುಲಭದಲ್ಲಿ ನಂಬಬೇಡಿ. ಸ್ವಲ್ಪ ಗೂಗಲ್ ಹಾಗೂ ಫೇಸ್ಬುಕ್ಕಿನಲ್ಲಿ ಸಂಶೋಧನೆ ಮಾಡಿ.

What do you think?

0 points
Upvote Downvote

Total votes: 0

Upvotes: 0

Upvotes percentage: 0.000000%

Downvotes: 0

Downvotes percentage: 0.000000%

Comments

Leave a Reply

Your email address will not be published. Required fields are marked *

Loading…

Loading…

ಮೋದಿಯವರನ್ನು ಹೊಗಳುವ ಭರದಲ್ಲಿ ಸುಳ್ಳು ವಿಡಿಯೋಗಳು ಫೇಸ್ಬುಕ್ ನಲ್ಲಿ ವೈರಲ್

ಸೈನ್ಯಪ್ರೇಮ ಹಾಗೂ ದೇಶಪ್ರೇಮವನ್ನು ಲೈಕ್ ಹಾಗೂ ಹಣಗಳಿಸಲು ಬಳಸಿದ Laughing Colours ಎಂಬ ಫೇಸ್ಬುಕ್ ಪೇಜ್