in ,

ಮೋದಿಯವರನ್ನು ಹೊಗಳುವ ಭರದಲ್ಲಿ ಸುಳ್ಳು ವಿಡಿಯೋಗಳು ಫೇಸ್ಬುಕ್ ನಲ್ಲಿ ವೈರಲ್

2010 ರಲ್ಲಿ ಅಮೆರಿಕಾದ ಮಾಜಿ ಅಧ್ಯಕ್ಷ ಒಬಾಮರವರು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಬೆಂಗಾವಲು ಪಡೆಯೊಂದಿಗೆ ಹಾದುಹೋಗುವ ವಿಡಿಯೋವನ್ನು ಮೋದಿಯವರ ಬೆಂಗಾವಲು ಪಡೆ ಎಂದು ಹಲವಾರು ಫೇಸ್ಬುಕ್ ಪೇಜ್ ಗಳು ಪೋಸ್ಟ್ ಮಾಡಿತ್ತು ಹಾಗೂ ಇದನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ.

ಭಾರತದಲ್ಲಿ ಹೆಚ್ಚಾಗಿ ಮೋದಿ ಭಕ್ತರು ಸಾಮಾಜಿಕ ಜಾಲತಾಣವನ್ನು ಕೃತಕ ಪ್ರೀತಿ ತೋರ್ಪಡೆಗೆ ದುರ್ಬಳಕೆ ಮಾಡಿಕೊಂಡಿರುವುದು ಹೊಸದೇನಲ್ಲ. ಆದರೂ ಸತ್ಯವನ್ನು ತೋರಿಸಲೇಬೇಕಾಗಿದೆ. ಅವರ ಐಟಿ ಸೆಲ್ ಹಾಗೂ ಆ ಕಾರ್ಖಾನೆಯಿಂದ ಹೊರಗೆ ಹಂಚಲ್ಪಡುವ ಅನೇಕ ಸುಳ್ಳು ಹಾಗೂ ಉತ್ಪ್ರೇಕ್ಷಿತ ಪೋಸ್ಟುಗಳ ಬಗ್ಗೆ ಸಾಧಾರಣ ಎಲ್ಲಾ ಬುದ್ಧಿವಂತ ಜನರಿಗೆ ತಿಳಿದೇ ಇದೆ, ಆದರೆ ತುಂಬಾ ಜನರಿಗೆ ಇನ್ನೂ ತಿಳುವಳಿಕೆ ಮುಟ್ಟಿಸುವ ಅಗತ್ಯತೆ ಇದೆ.

ಜೂನ್ ತಿಂಗಳ ಕೊನೆಯ ವಾರದಲ್ಲಿ ಮೋದಿಯವರು ಅಮೆರಿಕಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಭಕ್ತ ಜನರ ಭಕ್ತಿಯನ್ನು ಇನ್ನೂ ಉತ್ತೇಜನಗೊಳಿಸಲು ಅವರ ಬೆಂಬಲಿಗರು ಹಾಗೂ ಐಟಿ ಸೆಲ್ ಡಿಪಾರ್ಟ್ಮೆಂಟ್ 2010ರ ಒಬಾಮ ತನ್ನ ಬೆಂಗಾವಲು ಪಡೆಯೊಂದಿಗೆ ಸ್ಯಾನ್ ಫ್ರಾನ್ಸಿಸ್ಕೋನ ರಸ್ತೆಯೊಂದರಲ್ಲಿ ಹಾದು ಹೋಗುವ ವಿಡಿಯೋವನ್ನು ಮೋದಿಯವರ “ಬೆಂಗಾವಲು ಪಡೆಯೊಂದಿಗೆ” ಅದ್ಧೂರಿ ಸ್ವಾಗತ ಎಂದು ಬಿಂಬಿಸಲಾಗಿತ್ತು.

ನೂರಾರು ಮೋದಿ ಭಕ್ತಿ ತೋರಿಸುವ ಪೇಜ್ ಗಳು ಈ ವಿಡಿಯೋವನ್ನು ಶೇರ್ ಮಾಡಿತ್ತು ಹಾಗೂ ಶೀರ್ಷಿಕೆಯಲ್ಲಿ “ಮೋದಿಜಿಯವರಿಗೆ ಅದ್ಧೂರಿ ಸ್ವಾಗತ, ಶೇರ್ ಮಾಡಿ” ಎಂದೂ ಹಾಕಲಾಗಿತ್ತು. ಕಾಮೆಂಟ್ಸ್ ಸೆಕ್ಷನ್ ನಲ್ಲಿ ಭಕ್ತರ ಆನಂದ ಪರಾಕಾಷ್ಠೆಗೆ ತಲುಪಿತ್ತು. ಹೊಗಳುವ ಭರದಲ್ಲಿ ಕಾಂಗ್ರೆಸ್ ಹಾಗೂ ಕಮ್ಯುನಿಸ್ಟರ ಮೇಲೆ ಒಂದಿಷ್ಟು ಬೈಗುಳಗಳೂ ಇದ್ದವು.

RSS – Rashtriya Swayamsevak Sangh Fans, Atal Bihari Vajpayee, Narendra Modi – True Indian ಹಾಗೂ ಇನ್ನಿತರ ಭಕ್ತ ಪೇಜ್ಗಳು ಈ ವಿಡಿಯೋವನ್ನು ಶೇರ್ ಮಾಡಿತ್ತು. ಆದರೆ, ಕಳೆದ ವಾರ ಆಲ್ಟ್ ನ್ಯೂಸ್ ಎಂಬ ಆನ್ಲೈನ್ ವೆಬ್ಸೈಟ್ ಇದನ್ನು ಬಹಿರಂಗಪಡಿಸಿದ ನಂತರ ಅನೇಕ ಪೇಜ್ ಗಳು ವಿಡಿಯೋವನ್ನು ಡಿಲೀಟ್ ಮಾಡಿವೆ. ಆದರೆ ಆಗಷ್ಟೇ 3-4 ದಶಲಕ್ಷದಷ್ಟು ಮಂದಿ ವೀಕ್ಷಿಸಿಯಾಗಿತ್ತು.

ಇಲ್ಲಿ Modi followers ಎಂಬ ಫೇಸ್ಬುಕ್ ಪೇಜ್ ಈಗಲೂ ವಿಡಿಯೋವನ್ನು ಡಿಲೀಟ್ ಮಾಡಿಲ್ಲ ಹಾಗೂ ಆ ವಿಡಿಯೋವನ್ನು ಈಗಾಗಲೇ ಹತ್ತೊಂಬತ್ತು ಲಕ್ಷ ಮಂದಿ ವೀಕ್ಷಿಸಿದ್ದರೆ ಹಾಗೂ 24,000 ಮಂದಿ ಶೇರ್ ಮಾಡಿದ್ದಾರೆ.

ಒಬಾಮ ಸಂಚರಿಸುತ್ತಿದ್ದ ಮೂಲ ವಿಡಿಯೋವನ್ನು ನೀವು ಕೆಳಗಡೆ ವೀಕ್ಷಿಸಬಹುದು.

ಸುಳ್ಳುಗಳ ಸಂತೆಯಲ್ಲಿ ನೀವು ಬದುಕಬೇಡಿ, ಸತ್ಯ ಏನೆಂಬುದನ್ನು ನೀವು ಅರಿತುಕೊಳ್ಳಿ. ಈ ಪೋಸ್ಟನ್ನು ಶೇರ್ ಮಾಡಿ ಹಾಗೂ ನಿಮ್ಮ ಗೆಳೆಯರಿಗೂ ತಿಳಿಸಿ.

What do you think?

0 points
Upvote Downvote

Total votes: 0

Upvotes: 0

Upvotes percentage: 0.000000%

Downvotes: 0

Downvotes percentage: 0.000000%

Comments

Leave a Reply

Your email address will not be published. Required fields are marked *

Loading…

Loading…

ಕೇರಳ ಸ್ಟೂಡೆಂಟ್ಸ್ ಯೂನಿಯನ್ ಪ್ರತಿಭಟನೆಯ ವಿಡಿಯೋವನ್ನು ಬಿಜೆಪಿಯ ಪ್ರತಿಭಟನೆಯೆಂದು ಸುಳ್ಳು ಹೇಳಿದ ಟೈಮ್ಸ್ ನೌ ಟಿವಿ ಚಾನೆಲ್

ಸುಳ್ಳು ಸುದ್ದಿ ಹಾಗೂ ನಕಲಿ ವಿಡಿಯೋ ಹರಡಿದ ಬಿಜೆಪಿ ಐಟಿ ಸೆಲ್ಲಿನ ಕಾರ್ಯದರ್ಶಿಯ ಬಂಧನ