in

ಕೇರಳ ಸ್ಟೂಡೆಂಟ್ಸ್ ಯೂನಿಯನ್ ಪ್ರತಿಭಟನೆಯ ವಿಡಿಯೋವನ್ನು ಬಿಜೆಪಿಯ ಪ್ರತಿಭಟನೆಯೆಂದು ಸುಳ್ಳು ಹೇಳಿದ ಟೈಮ್ಸ್ ನೌ ಟಿವಿ ಚಾನೆಲ್

ಟೈಮ್ಸ್ ನೌ ಪ್ರಸಾರ ಮಾಡಿದ ವಿಡಿಯೋನಲ್ಲಿ “ಎಕ್ಸ್ಕ್ಲೂಸಿವ್” ಹಾಗೂ “ಟೈಮ್ಸ್ ನೌನಲ್ಲಿ ಮೊದಲು” ಎನ್ನುವ ವಾಟರ್ಮಾರ್ಕ್ ಕೂಡಾ ಇತ್ತು.

ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಸಂಘವಾದ INSU ನ ಕೇರಳ ವಿಭಾಗವಾದ KSU ಸಂಘಟನೆ ಮೆಡಿಕಲ್ ಫೀಸ್ ಹೆಚ್ಚಳದ ವಿರುದ್ಧ ಕೇರಳ ಸರ್ಕಾರದ ವಿರುದ್ಧ ನಡೆಸಿದಂತಹ ಪ್ರತಿಭಟನೆಯ ವಿಡಿಯೋ ತುಣುಕನ್ನು “ಬಿಜೆಪಿಯ ‘ಚಿಕೂನ್ಗುನ್ಯಾ’ ಹಾಗೂ ಇನ್ನಿತರ ಅರೋಗ್ಯ ಸಮಸ್ಯೆಗಳ ಶೀಘ್ರ ನಿಗ್ರಹಣೆಗಾಗಿ ಪ್ರತಿಭಟನೆ” ಎಂದು ತೋರಿಸಿದ ಇಂಗ್ಲೀಷ್ ಟಿವಿ ವಾಹಿನಿ ಟೈಮ್ಸ್ ನೌ ನಗೆಪಾಟಲಿಗೀಡಾಗಿದೆ.

ವಿಡಿಯೋ ತುಣುಕಿನಲ್ಲಿ ಟೈಮ್ಸ್ ನೌ ಟಿವಿ ವಾಹಿನಿಯು ಕೇರಳದಲ್ಲಿ ದುರಂತ, ಕೇರಳದ ಬಿಜೆಪಿಯಾ ವಿದ್ಯಾರ್ಥಿ ಸಂಘದ ಸದಸ್ಯರ ಮೇಲೆ ಪೊಲೀಸರಿಂದ ಲಾಠಿ ಪ್ರಹಾರ, ಹದಗೆಟ್ಟ ಪರಿಸ್ಥಿತಿ, ಕೇರಳದಲ್ಲಿ ಜನರಿಂದ ಸರಕಾರದ ವಿರುದ್ಧ ಹೋರಾಟ, ಇನ್ನೇನೇನೋ ಬರೆದು ಹಾಕುತ್ತಿತ್ತು.

KSUನ ಫೇಸ್ಬುಕ್ ಪೇಜ್ ನಲ್ಲಿ ಪ್ರತಿಭಟನೆಗಳ ಬಗ್ಗೆ ನೀವು ಇನ್ನಷ್ಟು ಓದಬಹುದು.

ಆ ವಿಡಿಯೋವನ್ನು ANI (Asian News International) ಕೂಡಾ ಶೇರ್ ಮಾಡಿತ್ತು. ಆದರೆ ಅದರಲ್ಲಿ ಅರ್ಧ ಸತ್ಯ ಅರ್ಧ ಸುಳ್ಳನ್ನು ಬೆರೆಸಲಾಗಿತ್ತು. ಅಲ್ಲಿ ANIಯು “ಶುಲ್ಕ ಹೆಚ್ಚಳದ ವಿರುದ್ಧ ಬಿಜೆಪಿಯ ಪ್ರತಿಭಟನೆ” ಎಂದು ಶೀರ್ಷಿಕೆ ಹಾಕಲಾಗಿತ್ತು. ಆದರೆ ನಿಜವಾಗಿ ಅಲ್ಲಿ ನಡೆದದ್ದು ಕಾಂಗ್ರೆಸ್ ನ ವಿದ್ಯಾರ್ಥಿ ಸಂಘದ ಪ್ರತಿಭಟನೆ. ಲಾಠಿ ಚಾರ್ಜ್ ಆದದ್ದು ಕಾಂಗ್ರೆಸ್ಸಿನ ವಿದ್ಯಾರ್ಥಿ ಸಂಘದ ಸದಸ್ಯರ ಮೇಲೆ.

ANI ಶೇರ್ ಮಾಡಿದ ವಿಡಿಯೋ ಇಲ್ಲಿದೆ ನೋಡಿ:

ಹಲವಾರು ಮಾಧ್ಯಮ ವರದಿಗಳು ದೃಢಪಡಿಸಿದಂತೆ, ಪ್ರತಿಭಟನೆಯು ಕೇರಳದ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ಎಂ.ಹಸ್ಸನ್ನಿಂದ ಪ್ರಾರಂಭಿಸಲ್ಪಟ್ಟಿತು ಮತ್ತು KSU ಆಯೋಜಿಸಿತ್ತು. “Self Financed” ವೈದ್ಯಕೀಯ ಕಾಲೇಜುಗಳಲ್ಲಿನ ಶುಲ್ಕ ಹೆಚ್ಚಳಕ್ಕೆ ಪ್ರತಿಭಟಿಸಿ ಪ್ರತಿಭಟನಾಕಾರರು ಕೇರಳ ಆರೋಗ್ಯ ಸಚಿವರ ನಿವಾಸಕ್ಕೆ ತೆರಳಿದ್ದರು. ಜೂನ್ ಕೊನೆಯ ವಾರದಲ್ಲಿ ಶುಲ್ಕ ಹೆಚ್ಚಳದ ವಿರುದ್ಧ ಕೆಎಸ್ಯು ಈ ಪ್ರತಿಭಟನೆಯನ್ನು ಘೋಷಿಸಿತು. ಬಿಜೆಪಿಯ ಪ್ರತಿಭಟನೆ ಹಾಗೂ ಬಿಜೆಪಿಗರ ಮೇಲೆ ಲಾಠಿ ಚಾರ್ಜ್ ಎಂದು ಸುಳ್ಳು ಸುದ್ದಿ ಪ್ರಸಾರ ಮಾಡಿದ ಏಕೈಕ ನ್ಯೂಸ್ ಚಾನೆಲ್ ಆಗಿತ್ತು Times Now.

ANI ಹಾಗೂ Times Now ಶೇರ್ ಮಾಡಿದ ವಿಡಿಯೋ ತುಣುಕುಗಳ screenshot ಗಳನ್ನು ಕೆಳಗೆ ಪೋಸ್ಟ್ ಮಾಡಲಾಗಿದೆ.

ವಿಡಿಯೋ ತುಣುಕನ್ನು Twitter ನಲ್ಲೂ ಪೋಸ್ಟ್ ಮಾಡಲಾಗಿತ್ತು. ಟೈಮ್ಸ್ ನೌ ನ ಯೂಟ್ಯೂಬ್ ಚಾನ್ನೆಲ್ನಲ್ಲೂ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿತ್ತು. ಆದರೆ ಈಗ ಎಲ್ಲವನ್ನೂ ಡಿಲೀಟ್ ಮಾಡಲಾಗಿದೆ. ಕೋಟ್ಯಂತರ ಅನುಯಾಯಿಗಳಿರುವ ಟಿವಿ ಚಾನೆಲ್ ಒಂದಾದ ಟೈಮ್ಸ್ ನೌ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುವುದು ಇದೆ ಮೊದಲೇನಲ್ಲ.

ಡಿಲೀಟ್ ಮಾಡಿದ ಯೂಟ್ಯೂಬ್ ವಿಡಿಯೋ ನ ಲಿಂಕ್ ಹೀಗಿತ್ತು – https://www.youtube.com/watch?v=u5urcKw0gfw – ಈಗ ಓಪನ್ ಆಗುವುದಿಲ್ಲ. ಆ ವಿಡಿಯೋಣ ಸಂಗ್ರಹಿಸಲಾದ ಆವೃತ್ತಿಯನ್ನು ಇಲ್ಲಿ ಕಾಣಬಹುದು. ಆ ವಿಡಿಯೋ ತುಣುಕನ್ನು ನೀವು zenga.tv ವೆಬ್ಸೈಟಿನಲ್ಲೂ ನೋಡಬಹುದು.

ಪ್ರತಿಷ್ಠಿತ ಟಿವಿ ವಾಹಿನಿಗಳೇ ಸುಳ್ಳು ವರದಿ ಪ್ರಸಾರ ಮಾಡಿದರೆ ಏನ್ ಸ್ವಾಮಿ ನಮ್ಮ ದೇಶದ ಗತಿ?

ಸುದ್ದಿಯ ಮೂಲ: Alt News

What do you think?

0 points
Upvote Downvote

Total votes: 0

Upvotes: 0

Upvotes percentage: 0.000000%

Downvotes: 0

Downvotes percentage: 0.000000%

Comments

Leave a Reply

Your email address will not be published. Required fields are marked *

Loading…

Loading…

ಶ್ರೀಲಂಕಾದ 2012ರ ಫೋಟೋವನ್ನು ಬಳಸಿ ಭಾರತದ ಮುಸ್ಲಿಮರ ಇಸ್ರೇಲ್ ವಿರುದ್ಧದ ಪ್ರತಿಭಟನೆಯೆಂದು ಬಿಂಬಿಸಲು ಪ್ರಯತ್ನಿಸಿದ ShankhNaad

ಮೋದಿಯವರನ್ನು ಹೊಗಳುವ ಭರದಲ್ಲಿ ಸುಳ್ಳು ವಿಡಿಯೋಗಳು ಫೇಸ್ಬುಕ್ ನಲ್ಲಿ ವೈರಲ್