in ,

Postcard.News ಹಾಗೂ TheYouth.in ಎಂಬ ವೆಬ್ಸೈಟ್ಗಳು ಹಾಗೂ ಫೋಟೋಶಾಪ್ ಮಾಡಿದ ಭಾರತದ ಬಾವುಟದ ಚಿತ್ರ

“The Youth” ಫೇಸ್ಬುಕ್ ಪುಟದ ಪೋಸ್ಟ್ ಅನ್ನು 2127 ಕ್ಕಿಂತಲೂ ಹೆಚ್ಚು ಬಾರಿ ಶೇರ್ ಮಾಡಲಾಗಿದೆ ಮತ್ತು ಈ ಪೋಸ್ಟ್ ಬರೆಯುವ ಸಮಯದಲ್ಲಿ Postcard.news na ಪೋಸ್ಟ್ 8k + Likeಗಳು ಮತ್ತು ನೂರಾರು ಕಾಮೆಂಟ್ಗಳೊಂದಿಗೆ 307 ಕ್ಕೂ ಹೆಚ್ಚು ಬಾರಿ ಶೇರ್ ಮಾಡಲಾಗಿದೆ!

Postcard.news ಹಾಗೂ The Youth ಎಂಬ ಎರಡು (ಇನ್ನೂ ಎಷ್ಟಿದೆಯೋ!) ವೆಬ್ಸೈಟ್ಗಳು ಅದರ ಫೇಸ್ಬುಕ್ ಪೇಜುಗಳಲ್ಲಿ ಇಸ್ರೇಲ್ ಪಾರ್ಲಿಮೆಂಟ್ ಕಟ್ಟಡದ ಛಾವಣಿಯ ಮೇಲೆ ಭಾರತೀಯ ಮತ್ತು ಇಸ್ರೇಲಿ ಧ್ವಜಗಳನ್ನು “ಫೋಟೋಶಾಪ್” ಮಾಡಿದ ಒಂದು ಚಿತ್ರವನ್ನು ಶೇರ್ ಮಾಡಿ ಮತ್ತೊಮ್ಮೆ ಸುಳ್ಳು ಸುದ್ದಿ ಹಬ್ಬಿಸಿ ಸಿಕ್ಕಿ ಹಾಕಿಕೊಂಡಿದ್ದಾರೆ.

ಈ ಚಿತ್ರದ ಶೀರ್ಷಿಕೆಯಲ್ಲಿ “ಭಾರತೀಯರಿಗೆ ಒಂದು ಹೆಮ್ಮೆಯ ದಿನ, ಮೋದಿಯವರು ಇಸ್ರೇಲಿಗೆ ಭೇಟಿ ನೀಡುವ ಮುನ್ನ ಇಸ್ರೇಲಿನವರು ಅವರ ಪಾರ್ಲಿಮೆಂಟ್ ಕಟ್ಟಡದ ಛಾವಣಿಯ ಮೇಲೆ ಭಾರತದ ಬಾವುಟವನ್ನು ಏರಿಸಿದ್ದಾರೆ,” ಎಂದು ಬರೆಯಲಾಗಿದೆ.ಒಟ್ಟಾರೆಯಾಗಿ ಎರಡೂ ಕಡೆ ಈ ಸುಳ್ಳು “ಫೋಟೋಶಾಪ್” ಚಿತ್ರಗಳು ಎರಡೂವರೆ ಸಾವಿರಕ್ಕಿಂತಲೂ ಹೆಚ್ಚು ಬಾರಿ ಶೇರ್ ಮಾಡಲಾಗಿದೆ ಹಾಗೂ ಸುಮಾರು ಹತ್ತು ಸಾವಿರ ಲೈಕ್ ಹಾಗೂ ಕಾಮೆಂಟ್ಗಳನ್ನು ಗಳಿಸಿದೆ.

ಹೌದು, ಇದು ಇಸ್ರೇಲ್ಗೆ ಭಾರತೀಯ ಪ್ರಧಾನ ಮಂತ್ರಿಯ ಒಂದು ಐತಿಹಾಸಿಕ ಭೇಟಿಯಾಗಿದೆ, ಆದರೆ ನಕಲಿ ರಾಷ್ಟ್ರೀಯತೆಯನ್ನು ಹರಡಲು, ಸತ್ಯವನ್ನು ಉತ್ಪ್ರೇಕ್ಷಿಸಲು, ಸಾಮೂಹಿಕ ನಕಲಿ ಸುದ್ದಿಗಳು ಹಾಗೂ ಫೋಟೋಶಾಪ್ ಚಿತ್ರಗಳನ್ನು ಉತ್ಪಾದಿಸುವ/ಹಂಚುವ ವೆಬ್ಸೈಟ್ಗಳು ಮತ್ತು ಅದರ ಫೇಸ್ಬುಕ್ ಪುಟಗಳು ಇಂತಹ ಸಂಪಾದಿಸಿದ ಚಿತ್ರಗಳನ್ನು ಹರಡಲು ಉತ್ತುಂಗದಲ್ಲಿರುತ್ತವೆ. ಈ ವೆಬ್ಸೈಟ್ಗಳ ಪ್ರಕಾರ, ಭಾರತೀಯ ನಾಗರಿಕರು ಫೋಟೊಶಾಪ್ ಮಾಡಲಾದ ಭಾರತೀಯ ಧ್ವಜ ಮತ್ತು ನಕಲಿ ಕಥೆ ಬಗ್ಗೆ ಹೆಮ್ಮೆ ಪಡಬೇಕಾಗಿದೆ.

ಜೇಮ್ಸ್ ಎಮೆರಿಯವರ ಇಸ್ರೇಲಿ ಪಾರ್ಲಿಮೆಂಟ್ ಕಟ್ಟಡದ ಮೂಲ ಫೋಟೋವನ್ನು ಕೆಳಗೆ ಪೋಸ್ಟ್ ಮಾಡಲಾಗಿದೆ:

ಅವರ ವೆಬ್ಸೈಟ್ನಲ್ಲಿ ಪೋಸ್ಟ್ ಮಾಡಿದಂತೆ, postcard.newsನ್ನು ಮಹೇಶ್ ವಿಕ್ರಮ್ ಹೆಗ್ಡೆ , ವಿವೇಕ್ ಶೆಟ್ಟಿ ಮತ್ತು ಅಂಕಿತಾ ರಾಜವರ್ಧನ್ ಅವರು ಸ್ಥಾಪಿಸಿ ನಡೆಸುತ್ತಿದ್ದಾರೆ.

ಮಹೇಶ್ ಹೆಗ್ಡೆ ಅವರನ್ನು ಟ್ವಿಟ್ಟರ್ ನಲ್ಲಿ ಪಿಎಂ ಮೋದಿ ಫಾಲೋ ಮಾಡುತ್ತಾರೆ ಹಾಗೂ ವಿವೇಕ್ ಶೆಟ್ಟಿ ಮತ್ತು ಅಂಕಿತಾ ರಾಜವರ್ಧನ್ ಅವರನ್ನು ಟ್ವಿಟ್ಟರ್ ನಲ್ಲಿ ಪಿಯುಶ್ ಗೋಯಲ್ರಂತಹ ಇತರ ಕೇಂದ್ರ ಸಚಿವರು ಅನುಸರಿಸುತ್ತಿದ್ದಾರೆ ಎಂದು AltNews.in ನ ಪ್ರತಿಕ್ ಸಿನ್ಹಾ ತಿಳಿಸಿದ್ದಾರೆ. ಅಂಕಿತಾ ರಾಜವರ್ಧನ್ರ ಟ್ವಿಟರ್ ಪ್ರೊಫೈಲ್ನಲ್ಲಿ ಸುಷ್ಮಾ ಸ್ವರಾಜ್, ಜನರಲ್ ವಿ.ಕೆ.ಸಿಂಗ್, ರಾಜ್ನಾಥ್ ಸಿಂಗ್ ಸೇರಿದಂತೆ ಹಲವು ಕೇಂದ್ರ ಸಚಿವರ ಜೊತೆಗೆ ತೆಗೆಸಿಕೊಂಡ ಚಿತ್ರಗಳನ್ನು ಕಾಣಬಹುದು. ಪೋಸ್ಟ್ಕಾರ್ಡ್ ನ್ಯೂಸ್ ‘ಫೇಸ್ಬುಕ್ ಪುಟ ಸುಮಾರು 190k ಫಾಲ್ಲೋರ್ಸ್ ನ್ನು ಹೊಂದಿದೆ.

Theyouth.in ಎಂಬ ವೆಬ್ಸೈಟ್ ಹಾಗೂ ಅದರ ಫೇಸ್ಬುಕ್ ಪೇಜುಗಳನ್ನು ಇಂದೋರ್ ನ ಮ್ರಿತ್ಯುಂಜಯ ಚೌಬೆ ಎಂಬವನು ನಡೆಸುತ್ತಿದ್ದು ( WHOIS ಮಾಹಿತಿಯ ಆಧಾರದಿಂದ ಕಂಡು ಹುಡುಕಲಾಗಿದೆ), ಈತನು ಇದೆ ತರಹದ ನಕಲಿ ರಾಷ್ಟ್ರೀಯತೆ ಹಾಗೂ ಬಲಪಂಥೀಯ ಲೇಖನಗಳನ್ನು ಪ್ರಕಟಿಸುವ Defencenews.in ಎಂಬ ವೆಬ್ಸೈಟ್ ಹಾಗೂ ಫೇಸ್ಬುಕ್ ಪುಟವನ್ನೂ ನಡೆಸುತ್ತಿದ್ದಾನೆ (WHOIS ಮಾಹಿತಿಯ ಆಧಾರದಿಂದ ಕಂಡು ಹುಡುಕಲಾಗಿದೆ).

Theyouth.in ನ ಫೇಸ್ಬುಕ್ ಪುಟ ಐದು ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದೆ. ಅದೇ ರೀತಿ defencenews.in ವೆಬ್ಸೈಟಿನ Indian Defence News ಎಂಬ ಪೇಜು ಹತ್ತು ಲಕ್ಷ ಅನುಯಾಯಿಗಳನ್ನು ಹೊಂದಿದೆ. ಈಗ ಸ್ವಲ್ಪ ಯೋಚಿಸಿ, ಇವರು ಎಷ್ಟು ಜನರಿಗೆ ಸುಳ್ಳು ಸುದ್ದಿಗಳನ್ನು ಹರಡಿಸುತ್ತಾರೆ!? ಈ ವ್ಯಕ್ತಿಯ ಒಂದು ಫೇಸ್ಬುಕ್ ಪೋಸ್ಟಿನ screenshot ನ್ನು ಕೆಳಗೆ ಪೋಸ್ಟ್ ಮಾಡಲಾಗಿದೆ:

What do you think?

0 points
Upvote Downvote

Total votes: 0

Upvotes: 0

Upvotes percentage: 0.000000%

Downvotes: 0

Downvotes percentage: 0.000000%

Comments

Leave a Reply

Your email address will not be published. Required fields are marked *

Loading…

Loading…

ಹಾಂಗ್-ಕಾಂಗ್ ನ ಆಸ್ಪತ್ರೆಯಲ್ಲಿ ಮಗುವಿನ ಅಳು ಕೇಳಿ ಸಾವಿನಿಂದ ಎದ್ದು ಬಂದ ತಾಯಿ – ಸತ್ಯಾಸತ್ಯತೆ

ಶ್ರೀಲಂಕಾದ 2012ರ ಫೋಟೋವನ್ನು ಬಳಸಿ ಭಾರತದ ಮುಸ್ಲಿಮರ ಇಸ್ರೇಲ್ ವಿರುದ್ಧದ ಪ್ರತಿಭಟನೆಯೆಂದು ಬಿಂಬಿಸಲು ಪ್ರಯತ್ನಿಸಿದ ShankhNaad