in ,

ಹಾಂಗ್-ಕಾಂಗ್ ನ ಆಸ್ಪತ್ರೆಯಲ್ಲಿ ಮಗುವಿನ ಅಳು ಕೇಳಿ ಸಾವಿನಿಂದ ಎದ್ದು ಬಂದ ತಾಯಿ – ಸತ್ಯಾಸತ್ಯತೆ

ಹೆರಿಗೆಯಾದ ನಂತರ ಕಣ್ಣು ಮುಚ್ಚಿದ ತಾಯಿಯ ಹತ್ತಿರ ಅಳುತ್ತಿರುವ ಮಗುವನ್ನು ನರ್ಸ್ ತಂದಿಟ್ಟಾಗ ಆ ತಾಯಿಯು ಕಣ್ಣು ತೆರೆದು ಮಗುವನ್ನು ಆರೈಸುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ವಾಟ್ಸಪ್ಪಿನಲ್ಲಿ ಬಹಳ ವೈರಲ್ ಆಗಿತ್ತು.

ಮಿರಾಕಲ್! ಹಾಂಗ್-ಕಾಂಗ್ ನ ರಾಣಿ ಎಲಿಜಬೆತ್ ಆಸ್ಪತ್ರೆಯಲ್ಲಿ 3 ಗಂಟೆಗಳ ಕಾಲ ಮೃತ ತಾಯಿ ತನ್ನ ಮಗು ಅಳುವುದನ್ನು ಕೇಳಿ ಸಾವಿನಿಂದ ಎದ್ದು ಬಂದಳು. ಆಮೆನ್ ಟೈಪ್ ಮಾಡಿ ಮತ್ತು ಇದು ದೇವರ ಪವಾಡ! – – ಇದು ಒಂದು ಅಳುತ್ತಿರುವ ಮಗು ಹಾಗೂ ತಾಯಿಯ ವೈರಲ್ ವಿಡಿಯೋ WhatsApp ಮತ್ತು Facebook ನಲ್ಲಿ ಶೇರ್ ಮಾಡುವಾಗ ಅನೇಕ ಸೇರಿಸಲಾದ ಪದಗಳು.

ಈ ವಿಡಿಯೋ ನೋಡಲು ಮುದ್ದಾಗಿದೆ ಹಾಗೂ ಹೃದಯಕ್ಕೆ ಮುಟ್ಟುವಂಥದ್ದು, ಆದರೆ ಈ ವಿಡಿಯೋಗೆ ಸೇರಿಸಲಾದ ಶೀರ್ಷಿಕೆ ಮಾತ್ರ ಉತ್ಪ್ರೇಕ್ಷಕರವಾದದ್ದು. ಜನರು ಸತ್ತ ಮನುಷ್ಯರನ್ನು ಎದ್ದು ತರುವುದು ಹಾಗೂ ದೇವರ ಹೆಸರಲ್ಲಿ ಪವಾಡವನ್ನು ನೋಡುವುದನ್ನು ತುಂಬಾ ನಿರೀಕ್ಷಿಸುತ್ತಿರುವಂತಿದೆ. ಆದ್ರೆ ಏನು ಮಾಡುವುದು ಹೇಳಿ, ಮುಗ್ಧ ಜನರನ್ನು ದೇವರ ಹೆಸರಲ್ಲಿ, ಪವಾಡದ ಹೆಸರಲ್ಲಿ ಅವರ ಭಾವನೆಯನ್ನು ಹೇಗೆ ಬೇಕೋ ಹಾಗೆ ತಿರುಗಿಸುವವರೂ ಇದ್ದಾರೆ.

ಈ ವಿಡಿಯೋವನ್ನು ತುಂಬಾ “ಜಾಹೀರಾತಿನಿಂದ ಹಣ ಮಾಡುವ” ವೆಬ್ಸೈಟ್ಗಳು ಹಾಗೂ ವಿವಿಧ ಧರ್ಮಗಳಿಗೆ ಸಂಬಂಧಪಟ್ಟ ವೆಬ್ಸೈಟ್ಗಳು, ಫೇಸ್ಬುಕ್ ಪೇಜುಗಳು ಶೇರ್ ಮಾಡಲು ಶುರು ಹಚ್ಚಿದರೆ ಪರಿಣಾಮ, ಪ್ರತಿಯೊಬ್ಬರೂ ಇದನ್ನು ನಂಬಿ ಫೇಸ್ಬುಕ್ ಹಾಗೂ ವಾಟ್ಸಪ್ಪಿನಲ್ಲಿ ಶೇರ್ ಮಾಡಿದ್ದಾರೆ. ಇಲ್ಲಿಯವರೆಗೆ ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ ಹಾಗೂ ವೀಕ್ಷಿಸಿದ್ದಾರೆ. ಸತ್ಯವೇನು?

ಯಾವನೇ ಒಬ್ಬ ಕಾಮನ್ ಸೆನ್ಸ್ ಇರುವ ಮನುಷ್ಯನಿಗೆ ಇದು ಒಂದು ಕಟ್ಟು ಕಥೆ ಎಂದು ಅರ್ಥವಾಗಬಹುದು ಎಂದು ನಾನು ಭಾವಿಸುತ್ತೇನೆ ಏಕೆಂದರೆ, ಯಾವುದೇ ಆಸ್ಪತ್ರೆಯಲ್ಲಿ ಹೆರಿಗೆಯಾದಾಕ್ಷಣ ತಾಯಿಯು ದಣಿಯುವುದು ಹಾಗೂ ಸ್ವಲ್ಪ ಮೂರ್ಛೆ ಹೋಗುವುದು ಅಥವಾ ನಿದ್ದೆಗೆ ಜಾರುವುದು ಸಾಮಾನ್ಯ. ಅದರಲ್ಲೂ ಸಿ-ಸೆಕ್ಷನ್ ಹೆರಿಗೆಯಾದರಂತೂ ಒಬ್ಬಳು ತಾಯಿ ತುಂಬಾ ಸುಸ್ತಾಗಿರುತ್ತಾಳೆ. ಇಲ್ಲಿ ನಡೆದದ್ದೂ ಅಷ್ಟೇ, ಆ ತಾಯಿ ಸತ್ತಿರಲಿಲ್ಲ, ಆಕೆ ಸಾವಿನಿಂದ ಎದ್ದು ಬರಲೂ ಇಲ್ಲ.

ಚೈನೀಸ್ ಭಾಷೆ ಮಾತನಾಡುವ ಹಾಂಗ್-ಕಾಂಗ್ನಲ್ಲಿ ಪೋರ್ಚುಗೀಸ್ ಭಾಷೆ ಯಾರು ಆಡುತ್ತಾರೆ ನೀವೇ ಹೇಳಿ? ನೀವು ಸರಿಯಾಗಿ ವಿಡಿಯೋವನ್ನು ಗಮನಿಸಿದರೆ ನಿಮಗೆ ಅಲ್ಲಿ ನರ್ಸ್ ಹಾಗೂ ಒಂದು ಗಂಡಸು ಮಾತನಾಡುವುದನ್ನು ಕೇಳಿಸಬಹುದಾಗಿದೆ – ಅದು ಪೋರ್ಚುಗೀಸ್ ಭಾಷೆ. ಇರಲಿ, ಅದನ್ನೂ ನಂಬುವ, ಆದರೆ ಕೆಲವೇ ಕೆಲವು “ಜಾಹೀರಾತಿನಿಂದ ಹಣ ಗಳಿಸುವ” ವೆಬ್ಸೈಟ್ ಹಾಗೂ ಧರ್ಮವನ್ನು ಪಸರಿಸುವ ಫೇಸ್ಬುಕ್ ಪೇಜುಗಳನ್ನು ಬಿಟ್ಟು ಬೇರೆ ಯಾವುದೇ ಮುಖ್ಯವಾಹಿನಿಯ ಮಾಧ್ಯಮಗಳು ಹಾಗೂ ಆನ್ಲೈನ್ ನ್ಯೂಸ್ ವೆಬ್ಸೈಟುಗಳು ಈ ಸುದ್ದಿಯನ್ನು ಯಾಕೆ ಪ್ರಕಟಿಸಲಿಲ್ಲ?

ಈಗಿನ ಇಂಟರ್ನೆಟ್ ಯುಗದಲ್ಲಿ ಸತ್ಯವನ್ನು ಪರಿಶೀಲಿಸಲು ಯಾರು ಬಯಸುತ್ತಾರೆ? ಇಂತಹ ಸುಳ್ಳು ವೀಡಿಯೊಗಳನ್ನು ನಾವು ಏಕೆ ತಿರಸ್ಕರಿಸಬೇಕು? ಯಾರಿಗ್ ಬೇಕೂರಿ ಅದೆಲ್ಲ? ಅಮೆನ್ ಎಂದು ಟೈಪ್ ಮಾಡಿ ಪುಣ್ಯ ಗಳಿಸಿ!

What do you think?

-1 points
Upvote Downvote

Total votes: 1

Upvotes: 0

Upvotes percentage: 0.000000%

Downvotes: 1

Downvotes percentage: 100.000000%

Comments

Leave a Reply

Your email address will not be published. Required fields are marked *

Loading…

Loading…

ಲೈವ್ ಟಿವಿಯಲ್ಲಿ ಕ್ರೇನಿನಿಂದ ಕೆಳಗೆ ಬಿದ್ದ ಪಾಕಿಸ್ತಾನದ ಮಹಿಳಾ ಆಂಕರ್ ಸಾವು – ಸತ್ಯಾಸತ್ಯತೆ

Postcard.News ಹಾಗೂ TheYouth.in ಎಂಬ ವೆಬ್ಸೈಟ್ಗಳು ಹಾಗೂ ಫೋಟೋಶಾಪ್ ಮಾಡಿದ ಭಾರತದ ಬಾವುಟದ ಚಿತ್ರ